ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು. ತಪ್ಪು ಯಾರೇ ಮಾಡಿರಲಿ, ಹೇಗೆ ಮಾಡಿರಲಿ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು, ಆಗಿಯೇ ಆಗುತ್ತೆ ಎಂದು ನಟಿ ದಿವ್ಯಾ ಸುರೇಶ್ ಮಾತನಾಡಿದ್ದಾರೆ.
‘ಹಿಟ್ ಆ್ಯಂಡ್ ರನ್’ ಆರೋಪಕ್ಕೆ ಸಂಬಂಧಿಸಿದಂತೆ ವಿಡಿಯೊ ಪೋಸ್ಟ್ ಶೇರ್ ಮಾಡಿರುವ ದಿವ್ಯಾ ಸುರೇಶ್, ತಪ್ಪು ಮಾಡುವುದು ಮನುಷ್ಯನ ಸಹಜ ಗುಣ. ಹಾಗೇಯೇ ತಪ್ಪು ಮಾಡಿದ ಮೇಲೆ ಕ್ಷಮಿಸಿ ಎಂದು ಕೇಳುವುದೂ ಒಳ್ಳೆಯ ಗುಣ. ಜತೆಗೆ ಮಾಡಿದ ತಪ್ಪನ್ನು ಕ್ಷಮಿಸುವುದೂ ಸಹ ದೊಡ್ಡ ಗುಣ. ಆದರೆ ಕೆಲವರು ತಪ್ಪು ಮಾಡಿದರೂ ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳದೇ ವಿತ್ತಂಡ ವಾದ ಮಾಡುತ್ತಾರೆ. ಮತ್ತೆ ಕೆಲವರು ತಾವು ಮಾಡದ ತಪ್ಪಿಗೂ ಕೆಲವೊಮ್ಮೆ ಕ್ಷಮೆ ಕೇಳುವ ಪರಿಸ್ಥಿತಿ ಎದುರಾಗುತ್ತದೆ” ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೇ ಇದೇ ಹಿಟ್ ಆ್ಯಂಡ್ ರನ್ ಆರೋಪದ ಕುರಿತು ಯೂಟ್ಯೂಬ್‌ನಲ್ಲಿ ಹಾಕಿರುವ ವಿಡಿಯೊಗಳಿಗೆ ಹಾಕಿರುವ ಅನೇಕ ಕಮೆಂಟ್‌ಗಳ ಸ್ಕ್ರೀನ್ ಶಾಟ್‌ಗಳನ್ನು ಸಹ ದಿವ್ಯಾ ಸುರೇಶ್ ಹಂಚಿಕೊಂಡಿದ್ದು, ನನ್ನ ಪರವಾಗಿ ಕಮೆಂಟ್ ಮಾಡಿದ ಪುಣ್ಯಾತ್ಮರಿಗೆ ಧನ್ಯವಾದಗಳು. ಜನ ಬೆಂಬಲಕ್ಕಿಂತ ಮತ್ತೊಂದು ಇಲ್ಲ ಎಂದು ಹೇಳಿದ್ದಾರೆ.

 
                                    