ಮೀಟಿಂಗ್ ಇದೆ, ಎಕ್ಸ್ಟ್ರಾ ಕೆಲಸ ಇದೆ, ಮನೆಲಿ ಮದುವೆ ಇದೆ, ಗೃಹಪ್ರವೇಶ ನಾಳೆನೇ ಇದೆ, ಫ್ರೆಂಡ್ಸ್ ಎಲ್ಲ ಸಿಕ್ಕು ಎಷ್ಟು ದಿನ ಆಯ್ತು ಅಂತ ರಾತ್ರಿಯಿಡೀ ಎದ್ದಿದ್ದೀರಾ? ಎರಡು ದಿನ ನಿದ್ದೆ ಬಿಟ್ರೆ ಏನಾಗತ್ತೆ ಗೊತ್ತಾ?
ಏನಾಗೋಕೆ ಸಾಧ್ಯ ಕೂತ ಕೂತಲ್ಲೇ ನಿದ್ದೆ ಬರತ್ತೆ, ಒಂದು ನಿಮಿಷ ಅಥವಾ ಒಂದು ಗಂಟೆವರೆಗೆ ನಿದ್ದೆ ಮಾಡ್ತೀರಿ. ಪ್ರಜ್ಞೆಯೇ ಇಲ್ಲದವರಂತೆ!
ನಿಮ್ಮ ನೆನಪಿನ ಶಕ್ತಿ, ಕೆಲಸ ಮಾಡುವ ರೀತಿ ಎಲ್ಲವೂ ಬದಲಾಗುತ್ತದೆ. ಒಳ್ಳೆಯ ರೀತಿಯಲ್ಲಲ್ಲ!
ನಗುತ್ತಾ ಮಾತನಾಡಿಸಿದವರ ಮೇಲೂ ರೇಗ್ತೀರಿ, ಪ್ಯಾನಿಕ್ ಅಟ್ಯಾಕ್ ಆಗತ್ತೆ, ಒತ್ತಡ, ಡಿಪ್ರೆಷನ್ ಎಲ್ಲ ಸಮಸ್ಯೆ ಅಂಟಿಕೊಳ್ಳತ್ತೆ.
ಎರಡು ದಿನ ಕಂಪ್ಲೀಟ್ ಆಗಿ ನಿದ್ದೆ ಬಿಟ್ರೆ ಕುಡಿದವರಂತೆ ತೇಲೋಕೆ ಶುರು ಮಾಡ್ತೀರಿ. ಎದುರುಗಡೆ ನಡೆಯದೇ ಇದ್ದಿದ್ದೆಲ್ಲ ನಡೆದಿದೆ ಎನಿಸುತ್ತದೆ. ಎದುರಿಗೆ ಯಾರಿಲ್ಲದಿದ್ದರೂ ಜನ ಇದ್ದಾರೆ ಎನಿಸುತ್ತದೆ.
ನಿಜ ಯಾವುದು ಸುಳ್ಳು ಯಾವುದು ಅನ್ನೋದೇ ಅರ್ಥ ಆಗೋದಿಲ್ಲ. ಇಮ್ಯುನಿಟಿ ಕ್ಷೀಣಿಸುತ್ತದೆ.
ನಿಮ್ಮ ದೇಹಕ್ಕೂ, ಅದರೊಳಗಿನ ಅಂಗಾಂಗಕ್ಕೂ ಎಲ್ಲದಕ್ಕೂ ಕನೆಕ್ಷನ್ ಇಲ್ಲದಂತಾಗುತ್ತದೆ. ಈ ಸಮಯದಲ್ಲಿ ಅಪಘಾತ ಆಗೋದು ಹೆಚ್ಚು. ಮೆದುಳು ಕೆಲಸ ಮಾಡೋಕೆ ರೆಸ್ಟ್ ಬೇಕೇ ಬೇಕು. ನೀವಾಗೇ ರೆಸ್ಟ್ ಕೊಡದಿದ್ರೆ ಅದಕ್ಕೆ ಬೇಕಾದಂತೆ ನಿಮ್ಮನ್ನು ಆಟ ಆಡಿಸುತ್ತದೆ.

