Sunday, October 26, 2025

ದೆಹಲಿಯಲ್ಲಿ ಕುಸಿದ ವಾಯುಗುಣಮಟ್ಟ: ಕೃತಕ ಮಳೆಗೆ ತಯಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ತೀವ್ರ ಕೆಟ್ಟಿದ್ದು, ಸೋಮವಾರದಿಂದ ಪಶ್ಚಿಮದ ಅಡಚಣೆ ಕಾರಣ ಕನಿಷ್ಠ ತಾಪಮಾನ 18-20 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. ಭಾರತದ ಹವಾಮಾನ ಇಲಾಖೆಯ (IMD) ಪ್ರಕಾರ, ಸೋಮವಾರ ಮತ್ತು ಮಂಗಳವಾರ ದೆಹಲಿಯಲ್ಲಿ ಹಗುರ ಮಳೆ ಅಥವಾ ತುಂತುರು ಮಳೆಯಾಗುವ ಸಾಧ್ಯತೆ ಇದೆ.

ಆನಂದ್ ವಿಹಾರ್ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 420 ತಲುಪಿದ್ದು, ನಗರದ ಇತರ ಭಾಗಗಳಲ್ಲಿಯೂ ಮಾಲಿನ್ಯ ಪ್ರಮಾಣ ಹೆಚ್ಚು ಕಂಡು ಬಂದಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಪ್ರಕಾರ, ಲೋಧಿ ರಸ್ತೆ, ಇಂಡಿಯಾ ಗೇಟ್ ಮತ್ತು ವಿವೇಕ್ ವಿಹಾರ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಕಳಪೆಯಾಗಿದೆ.

ಈ ಪರಿಸ್ಥಿತಿಯಿಂದಾಗಿ ದೆಹಲಿ ಸರ್ಕಾರ, ಅಕ್ಟೋಬರ್ 29 ಮತ್ತು 30 ರಂದು ಎರಡು ದಿನಗಳ ಕಾಲ ಕೃತಕ ಮಳೆಯ ಯೋಜನೆ ಜಾರಿಗೆ ತಂದಿದೆ. ಗುರುವಾರ ಬುರಾರಿ ಪ್ರದೇಶದಲ್ಲಿ ಸಿಲ್ವರ್ ಅಯೋಡೈಡ್ ಮತ್ತು ಸೋಡಿಯಂ ಕ್ಲೋರೈಡ್ ಬಳಸಿ ಕೃತಕ ಮಳೆಯ ಪರೀಕ್ಷೆ ಯಶಸ್ವಿಯಾಗಿ ನಡೆಸಲಾಗಿದೆ. ಈ ಕ್ರಮದಿಂದ ದೆಹಲಿಯ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ ಕಾಣಿಸುವ ನಿರೀಕ್ಷೆ ಇದೆ.

error: Content is protected !!