September 30, 2026
Wednesday, September 30, 2026
spot_img

ರೀಲ್ಸ್ ಹುಚ್ಚಿಗೆ ಮತ್ತೊಂದು ಬಲಿ | ರಸ್ತೆ ಬದಿ ವಿಡಿಯೋ ಶೂಟಿಂಗ್: ಟ್ರಕ್ ಡಿಕ್ಕಿ, ಓರ್ವ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರ್ಯಾಣದ ನುಹ್‌ನಲ್ಲಿ ಯುವಕರು ರಸ್ತೆಬದಿಯಲ್ಲಿ ರೀಲ್ಸ್ ಶೂಟ್ ಮಾಡುವ ವೇಳೆ ಸಂಭವಿಸಿದ ಅಪಘಾತದಲ್ಲಿ 18 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇಬ್ಬರು ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶನಿವಾರ ಮಧ್ಯಾಹ್ನ, ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಮೊಹಮ್ಮದ್ ಮೊಯಿನ್ ಮತ್ತು ಅವರ ಇಬ್ಬರು ಸ್ನೇಹಿತರು ರೀಲ್ಸ್ ಚಿತ್ರೀಕರಿಸುತ್ತಿದ್ದರು. ಮೂವರಲ್ಲಿ ಒಬ್ಬ ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದಾಗ, ಹಿಂದಿನಿಂದ ವೇಗವಾಗಿ ಬಂದ ಕ್ಯಾಂಟರ್ ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ, ಮೊಯಿನ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಇಬ್ಬರು ಸ್ನೇಹಿತರು ಗಂಭೀರವಾಗಿ ಗಾಯಗೊಂಡು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಾಲಾಗಿದ್ದಾರೆ.

ಇದನ್ನೂ ಓದಿ:

ಪೊಲೀಸ್ ವರದಿಗಳ ಪ್ರಕಾರ, ಮೊಯಿನ್ ನುಹ್‌ನ ಶಹಪುರ್ ನಂಗ್ಲಿ ಗ್ರಾಮದ ನಿವಾಸಿಯಾಗಿದ್ದು, ಸ್ಥಳೀಯ ಖಾಸಗಿ ಶಾಲೆಯ ಹನ್ನೆರಡನೇ ತರಗತಿಯ ವಿದ್ಯಾರ್ಥಿಯಾಗಿದ್ದರು. ಘಟನೆ ನಿರ್ಬಂಧಿತ ಪ್ರದೇಶದಲ್ಲಿ ನಡೆದಿದೆ ಮತ್ತು ಘಟನೆ ಕೆಲವೊಂದು ದೃಶ್ಯಗಳು ರೀಲ್ಸ್ ಶೂಟಿಂಗ್ ವೇಳೆ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ.

Must Read