Sunday, October 26, 2025

‘ಪ್ಲಾಸ್ಟಿಕ್ ತಂದುಕೊಡಿ, ಊಟ ಮಾಡಿ’: ಮನ್​ ಕಿ ಬಾತ್​ನಲ್ಲಿ ಪ್ರಧಾನಿ ಮೋದಿ ಹೇಳಿದ್ದು ಯಾವ ಕೆಫೆ ಬಗ್ಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸದ್ಯದ “ಮನ್​ ಕಿ ಬಾತ್​” ಕಾರ್ಯಕ್ರಮದಲ್ಲಿ ಛತ್ತೀಸ್ಗಢದ ಅಂಬಿಕಾಪುರದಲ್ಲಿರುವ ವಿಶೇಷ ಕೆಫೆ ಬಗ್ಗೆ ವಿವರಿಸಿದ್ದಾರೆ. ಈ ಕೆಫೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ತರುವವರಿಗೆ ಉಚಿತ ಊಟ ನೀಡಲಾಗುತ್ತಿದ್ದು, ಒಂದು ಕೆಜಿ ಪ್ಲಾಸ್ಟಿಕ್ ತರುವವರಿಗೆ ಮಧ್ಯಾಹ್ನದ ಊಟ, ಅರ್ಧ ಕೆಜಿ ತರುವವರಿಗೆ ಬೆಳಗ್ಗೆ ತಿಂಡಿ ನೀಡಲಾಗುತ್ತದೆ. ಅಂಬಿಕಾಪುರ ಮುನ್ಸಿಪಲ್ ಕಾರ್ಪೊರೇಷನ್ ಈ ಕಾರ್ಯಕ್ರಮವನ್ನು ನಿರ್ವಹಿಸುತ್ತಿದೆ ಎಂದು ಪ್ರಧಾನಿ ಹೇಳಿದರು.

ರಿಯಾ ಶ್ವಾನದ ಬಗ್ಗೆ ಮೆಚ್ಚುಗೆ: ಮೋದಿ ಅವರು ಹಿಂದಿನ ವರ್ಷ ಲಕ್ನೋದಲ್ಲಿ ನಡೆದ ಅಖಿಲ ಭಾರತ ಪೊಲೀಸ್ ಕರ್ತವ್ಯ ಮೀಟ್‌ನಲ್ಲಿ ರಿಯಾ ಎಂಬ ಬಿಎಸ್‌ಎಫ್ ತರಬೇತಿಪ ಪಡೆದ ನಾಯಿಯ ಧೈರ್ಯ ಮತ್ತು ಕಾರ್ಯಕ್ಷಮತೆಯನ್ನು ಮೆಚ್ಚಿದ್ದಾರೆ. ದೇಶೀಯ ನಾಯಿಗಳ ಮಹತ್ವವನ್ನು ಹಿರಿಮೆಯಿಂದ ವಿವರಿಸಿದರು.

ಪರಿಸರ ಸಂರಕ್ಷಣೆಯ ಕುರಿತು ಮೋದಿ ಅವರು ಮ್ಯಾಂಗ್ರೋವ್ ಕಾಡಿನ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಮ್ಯಾಂಗ್ರೋವ್ ಗಿಡಗಳು ಉಪ್ಪುನೀರು ಮತ್ತು ಜೌಗು ಪ್ರದೇಶಗಳಲ್ಲಿ ಬೆಳೆಯುತ್ತಿದ್ದು, ಸಮುದ್ರ ಪರಿಸರ ವ್ಯವಸ್ಥೆಯ ಸ್ಥಿರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸುನಾಮಿ ಅಥವಾ ಚಂಡಮಾರುತಗಳ ಸಂದರ್ಭದಲ್ಲಿ ಮ್ಯಾಂಗ್ರೋವ್ ಗಿಡಗಳು ರಕ್ಷಣಾ ಭೂಮಿಕೆಯನ್ನು ನಿರ್ವಹಿಸುತ್ತವೆ ಎಂದು ಪ್ರಧಾನಿ ಮಾಹಿತಿ ನೀಡಿದ್ದಾರೆ.

ಸ್ಥಳೀಯ ಹಸಿರಿನ ಹೆಚ್ಚಳಕ್ಕಾಗಿ ಮತ್ತು ಕೆರೆಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯಾಚರಣೆಯ ಬಗ್ಗೆ ಅವರು ಬೆಂಗಳೂರಿನ ಎಂಜಿನಿಯರ್ ಕಪಿಲ್ ಶರ್ಮಾ ತಂಡದ ಕೆಲಸವನ್ನು ಶ್ಲಾಘಿಸಿದ್ದಾರೆ. 2007 ರಲ್ಲಿ ಹಸಿರು ಪ್ರದೇಶಗಳು ಕಡಿಮೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಬೆಂಗಳೂರು ಮತ್ತು ಸುತ್ತಮುತ್ತಲಿನ 40 ಬಾವಿಗಳು ಮತ್ತು ಆರು ಕೆರೆಗಳನ್ನು ಪುನರುಜ್ಜೀವನಗೊಳಿಸಿರುವುದು, ಸ್ಥಳೀಯ ನಿವಾಸಿಗಳು ಮತ್ತು ನಿಗಮಗಳನ್ನು ಭಾಗವಹಿಸಿಕೊಂಡು ನಡೆಸಿರುವ ಕಾರ್ಯವನ್ನು ಮೋದಿ ಮೆಚ್ಚಿದ್ದಾರೆ.

error: Content is protected !!