ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಚಿನ್ನದ ಬೆಲೆ ಮತ್ತೊಮ್ಮೆ ಏರಿಕೆಯಾಗಿದ್ದು, ಬೆಳ್ಳಿಯ ದರ ತೀವ್ರ ಕುಸಿತ ಕಂಡಿದೆ. ವಾರಾಂತ್ಯದಲ್ಲಿ ಶುದ್ಧ ಚಿನ್ನದ ದರ 130 ರೂ. ಏರಿಕೆ ಕಂಡರೆ, ಬೆಳ್ಳಿಯ ಬೆಲೆ ನಿರಂತರವಾಗಿ ಇಳಿಕೆಯಾಗುತ್ತಲೇ ಇದೆ. ವಿದೇಶಗಳಲ್ಲಿ ಚಿನ್ನದ ದರ ತುಸು ತಗ್ಗಿದರೂ, ಭಾರತದಲ್ಲಿ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗಿರುವುದು ಗಮನಾರ್ಹ. ಬೆಳ್ಳಿಯ ದರ ಮಾತ್ರ ದಿಢೀರ್ ಕುಸಿತ ಕಂಡು, ಗ್ರಾಮ್‌ಗೆ 155 ರೂ. ಮಟ್ಟಕ್ಕೆ ಇಳಿದಿದೆ.
ಪ್ರಸ್ತುತ ಭಾರತದಲ್ಲಿ 10 ಗ್ರಾಮ್ 22 ಕ್ಯಾರಟ್ ಚಿನ್ನದ ದರ 1,15,150 ಆಗಿದ್ದು, 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ ₹1,25,620 ಆಗಿದೆ. 100 ಗ್ರಾಮ್ ಬೆಳ್ಳಿಯ ದರ ₹15,500 ಆಗಿದೆ. ಬೆಂಗಳೂರಿನಲ್ಲಿ ಚಿನ್ನದ ದರ 10 ಗ್ರಾಮ್‌ಗೆ ₹1,15,150 ಮತ್ತು ಬೆಳ್ಳಿ ಬೆಲೆ 100 ಗ್ರಾಮ್‌ಗೆ ₹15,700 ಇದೆ. ಆದರೆ ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಬೆಳ್ಳಿಯ ದರ ₹17,000 ತಲುಪಿದೆ.

