Sunday, January 11, 2026

ದಿನಭವಿಷ್ಯ: ಕುಟುಂಬದಲ್ಲಿ ಇದ್ದ ಮನಸ್ತಾಪ ಇಂದು ನಿವಾರಣೆಯಾಗಲಿದೆ, ನಿಶ್ಚಿಂತೆಯಿಂದಿರಿ

ಮೇಷ
ನಿಮಗೆ ಹಿತವೆನಿಸದ ಬೆಳವಣಿಗೆ ಸಂಭವಿಸಬಹುದು. ಆದರೆ ಅದನ್ನು ಸರಿಪಡಿಸುವ ವಿಧಾನ ನಿಮಗೆ ತಿಳಿದಿದೆ. ಹಿಂಜರಿಕೆ ಬೇಡ.
ವೃಷಭ
ನಿಮ್ಮ ಸುತ್ತಲಿನವರು ನಿಮ್ಮನ್ನು ಅರ್ಥ ಮಾಡಿ ಕೊಳ್ಳುತ್ತಿಲ್ಲ ಎಂಬ ಕೊರಗು
ಬಿಡಿ. ಇತರರ ಮರುಳು
ಮಾತಿಗೆ  ಮರುಳಾಗ ಬೇಡಿ. ದೃಢ ನಿಲುವಿರಲಿ.  
ಮಿಥುನ
ಪ್ರಮುಖ ಕಾರ್ಯ ಫಲ ನೀಡುವ ದಿನ. ಈ ದಿನ ಸದುಪಯೋಗ ಪಡಿಸಿ. ವೃತ್ತಿಯಲ್ಲಿ ಉದಾಸೀನತೆ ಬಿಡಿ. ಕೌಟುಂಬಿಕ ಶಾಂತಿ.  
ಕಟಕ
ಆತ್ಮೀಯರ ಜತೆ ಭಿನ್ನಾಭಿಪ್ರಾಯ. ಸಣ್ಣ ವಿಷಯಕ್ಕೆ ರೇಗದಿರಿ. ಶಾಂತಚಿತ್ತರಾಗಿ.
ಬಿಗುಮಾನ ಬಿಟ್ಟು ವ್ಯವಹರಿಸಬೇಕು.  
ಸಿಂಹ
ನಿಮ್ಮ ಕುರಿತಂತೆ ವಿರೋಽಗಳ ಅಪ ಪ್ರಚಾರ ನಡೆದೀತು. ಅದನ್ನು ಕಡೆಗಣಿಸಿ. ಸಮಾನಮನಸ್ಕರ ಬೆಂಬಲ ಪಡೆಯಲು ಪ್ರಯತ್ನಿಸಿ.
ಕನ್ಯಾ
ಕುಟುಂಬ ಮನಸ್ತಾಪ ನಿವಾರಣೆ – ಸಂಬಂಧ  ಸುಧಾರಣೆ. ಹಿತಮಿತ ಆಹಾರ ಸೇವಿಸಿ. ಹೊಟ್ಟೆ ಕೆಡುವ ಪ್ರಸಂಗ ಉದ್ಭವಿಸೀತು.  
ತುಲಾ
ನಕಾರಾತ್ಮಕ ಚಿಂತನೆ ಬಿಟ್ಟು  ಪಾಸಿಟಿವ್ ಆಗಿ ಯೋಚಿಸಿ. ಅಸಾಧ್ಯದ ಕೆಲಸವೂ ನಿಮ್ಮಿಂದ ಸಾಧ್ಯ.  ಕುಟುಂಬ ಭಿನ್ನಮತ ನಿವಾರಿಸಿಕೊಳ್ಳಿ.
ವೃಶ್ಚಿಕ
ಎಲ್ಲರನ್ನು  ಮೆಚ್ಚಿಸುವ ಪ್ರಯತ್ನ ಫಲ ನೀಡದು. ಅಂತಹ ಪ್ರಯತ್ನ ಮಾಡಬೇಡಿ. ನಿಮ್ಮನ್ನು ಟೀಕಿಸುವವರನ್ನು ಕಡೆಗಣಿಸುವುದೇ ಒಳಿತು.
ಧನು
ಮನೆಯಲ್ಲಿ ಸೌಹಾರ್ದ ವಾತಾವರಣ.ಇದರಿಂದ ನಿಮಗೆ ಹೆಚ್ಚಿನ ಹುರುಪು. ದುಬಾರಿ ವಸ್ತು ಖರೀದಿಸುವ ಮುನ್ನ ಸರಿಯಾಗಿ ಪರಾಮರ್ಶಿಸಿ.  
ಮಕರ
ಇತರರ ಕೆಲಸ ದಲ್ಲಿ ಮೂಗು ತೂರಿಸ ದಿರಿ. ಅದರಿಂದ ನಿಮಗೆ ತೊಂದರೆ. ಭವಿಷ್ಯದ ಕುರಿತ ಚಿಂತೆ ಕಾಡ ಬಹುದು. ಆರ್ಥಿಕ ಒತ್ತಡ.  
ಕುಂಭ
ಕೆಲವರ ವರ್ತನೆ  ಕುರಿತು ಅತಿಯಾಗಿ ಚಿಂತಿಸಿ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುವಿರಿ. ಅಂತಹ ಮನೋಭಾವನೆ ಬಿಟ್ಟರೆ ಒಳಿತು.  
ಮೀನ
ವ್ಯವಹಾರ, ಹಣದ ವಿಚಾರ ಎಲ್ಲವೂ ನಿಮಗೆ ಪೂರಕವಾಗಿ ಸಾಗುವುದು. ನೆರೆಯವರ ಜತೆ ಕಲಹ ಬೇಡ. ಅದರಿಂದ  ಮನಶ್ಯಾಂತಿ ಹಾಳು.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!