ದಿನಭವಿಷ್ಯ : ನಿಮ್ಮ ಪಾಲಿಗೆ ಇಂದು ವಿಶೇಷ ದಿನವಾದೀತು,ವೈಯಕ್ತಿಕ ಬದುಕಿನಲ್ಲಿ ಮಹತ್ವದ ಬೆಳವಣಿಗೆ

ಮೇಷ
ನಡೆನುಡಿಯಲ್ಲಿ  ನಿಯಂತ್ರಣವಿರಲಿ. ಹದ ತಪ್ಪಿದ ಮಾತು ಸಂಬಂಧ ಕೆಡಿಸಬಹುದು. ಇತರರ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಲು  ಹೋಗಬೇಡಿ.

ವೃಷಭ
ಸರಿಯಾಗಿ ಯೋಚಿಸದೆ, ಆತುರದಿಂದ ಯಾವುದೇ ಕೆಲಸ ಮಾಡದಿರಿ. ಅದರಿಂದ ಸಮಸ್ಯೆಗೆ ಸಿಲುಕುವಿರಿ.  ಕೌಟುಂಬಿಕ ಭಿನ್ನಮತ ಉಂಟಾದೀತು.

ಮಿಥುನ
ವೃತ್ತಿ ಬದುಕಿನಲ್ಲಿ ಮಹತ್ವದ ಬದಲಾವಣೆ ಸಂಭವಿಸಬಹುದು. ಕೆಲವರ ನಡೆನುಡಿ ನಿಮ್ಮ ಮೇಲೆ ಪರಿಣಾಮ ಬೀರಬಹುದು. ಹಣದ ಸಮಸ್ಯೆ ನಿವಾರಣೆ.

ಕಟಕ
ಎಲ್ಲಾ ವಿಷಯಗಳಲ್ಲೂ ಅನುಕೂಲ ಸ್ಥಿತಿ ಉಂಟಾಗಲಿದೆ. ಆಪ್ತರಿಂದ ಸೂಕ್ತ ನೆರವು ಒದಗುವುದು. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣುವುದು.

ಸಿಂಹ
ಮುಖ್ಯ ವಿಷಯದಲ್ಲಿ  ನಿಮ್ಮ ನಿಲುವಿನೊಂದಿಗೆ ರಾಜಿ ಮಾಡಬೇಕಾಗು ವುದು. ಇತರರ ಅಭಿಪ್ರಾಯ ಒಪ್ಪಬೇಕು.ಅದರಿಂದ ಸಮಸ್ಯೆ ನಿವಾರಣೆ.

ಕನ್ಯಾ
ನಿಮ್ಮ ಪಾಲಿಗೆ ಇಂದು ವಿಶೇಷ ದಿನವಾದೀತು. ವೈಯಕ್ತಿಕ ಬದುಕಿನಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಬಹುದು. ಬಂಧುತ್ವ ವೃದ್ಧಿ. ಅನಿರೀಕ್ಷಿತ ಧನಲಾಭ.

ತುಲಾ
ನಿಮ್ಮ ಪಾಲಿಗೆ ಪೂರಕ ದಿನ. ಕಾರ್ಯಸಿದ್ಧಿ. ಎಲ್ಲವೂ ಬಯಸಿದ  ರೀತಿಯಲ್ಲೆ  ಸಾಗುವುದು. ಆರೋಗ್ಯ ಪರಿಸ್ಥಿತಿ ಸುಧಾರಿಸುವುದು.

ವೃಶ್ಚಿಕ
ನಿಮ್ಮ ಪ್ರಗತಿಗೆ ಬೇಕಾದ ಒಳ್ಳೆಯ ಅವಕಾಶ ಸಿಕ್ಕಿದರೆ ಅದನ್ನು ಕಳಕೊಳ್ಳದಿರಿ. ಹಣದ ವ್ಯವಹಾರದಲ್ಲಿ ನಿರೀಕ್ಷಿಸಿದ ಲಾಭ ದೊರಕುವುದಿಲ್ಲ.

ಧನು
ನಿಮ್ಮ ಎಂದಿನ ಕೆಲಸದ ಜತೆಗೇ ಹೆಚ್ಚುವರಿ ಹೊಣೆ ಬೀಳಲಿದೆ. ನಿಷ್ಠೆಯಿಂದ ಕಾರ್ಯ ಮಾಡಿದರೆ ಫಲಪ್ರಾಪ್ತಿ.  ಇತರರ ನಂಜು ಮಾತಿಗೆ ಕಿವಿಗೊಡದಿರಿ.

ಮಕರ
ವೃತ್ತಿಯಲ್ಲಿ ಸಫಲತೆ. ಉದ್ಯೋಗದಲ್ಲಿ ಉನ್ನತಿ.  ಕೌಟುಂಬಿಕ ಭಿನ್ನಮತ ಮೂಡಿದರೂ ಅದು ಉಲ್ಬಣಕ್ಕೇರದೆ ನಿವಾರಣೆ. ಆರ್ಥಿಕ ಒತ್ತಡ ಕಡಿಮೆ.

ಕುಂಭ
ಕುಟುಂಬ ಸದಸ್ಯರಿಗೆ ನೋವು ತರುವ ರೀತಿಯಲ್ಲಿ ವರ್ತಿಸಬೇಡಿ. ಅವರ ಭಾವನೆಗೆ ಸ್ಪಂದಿಸಿರಿ. ವೃತ್ತಿಯಲ್ಲಿ ಹಿನ್ನಡೆ ಉಂಟಾದೀತು.

ಮೀನ
ಸಕಾಲದಲ್ಲಿ ನಿಮ್ಮ ಕಾರ್ಯ ನೆರವೇರದೆ ನಿರಾಶೆ. ಕೆಲವರ ಅಸಹಕಾರ. ಕೆಲಸವನ್ನು ನಾಳೆಗೆ ಮುಂದೂಡುತ್ತಾ ಬರಬೇಡಿ. ಇಂದೇ ಮುಗಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!