ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಡಿಯಲು ಮಿಕ್ಸ್ಚರ್ ಕೊಡದಿದ್ದಕ್ಕೆ ಬಾರ್ ಕ್ಯಾಷಿಯರ್‌ನ್ನು ಹೆಂಡತಿ ಮಕ್ಕಳ ಎದುರೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಹಾಸನ ಮೂಲದ ಕುಮಾರ್ (45) ಎಂದು ಗುರುತಿಸಲಾಗಿದೆ. ಹತ್ಯೆ ಮಾಡಿದ ಆರೋಪಿಯನ್ನು ಸುಭಾಷ್ ಎಂದು ಗುರುತಿಸಲಾಗಿದೆ. ಕೊಲೆಯಾದ ಕುಮಾರ್ ಲಕ್ಕೂರು ಗ್ರಾಮದ ಅಶೋಕ ವೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಗೆ ಬಂದಿದ್ದ ಆರೋಪಿ ಕುಡಿಯುವ ವೇಳೆ, ಮಿಕ್ಸ್ಚರ್ ಕೇಳಿದ್ದಾನೆ. ನೀಡದ ಹಿನ್ನೆಲೆ ಗಲಾಟೆಯಾಗಿತ್ತು.
ಬಾರ್ ಬಂದ್ ಮಾಡಿ ಮನೆಗೆ ತೆರಳುತ್ತಿದ್ದ ಕುಮಾರ್‌ನನ್ನು ಆರೋಪಿ ಹಿಂಬಾಲಿಸಿದ್ದ. ಮನೆ ಬಳಿ ಬರುತ್ತಿದ್ದಂತೆ ಪತ್ನಿ, ಮಕ್ಕಳ ಎದುರೇ ಚುಚ್ಚಿ ಕೊಂದಿದ್ದಾನೆ.ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾರ್‌ನಲ್ಲಿ ಎಣ್ಣೆ ಜೊತೆಗೆ ಮಿಕ್ಸ್ಚರ್ ಕೊಡದ ಕ್ಯಾಶಿಯರ್‌ನ ಭೀಕರ ಕೊಲೆ!

