April 13, 2026
Monday, April 13, 2026
spot_img

Summer Drinks | ಬಿಸಿಲಿನ ಬೇಗೆ ತಣಿಸೋಕೆ ರಿಫ್ರೆಶಿಂಗ್ ಡ್ರಿಂಕ್ ಈ ಕಲ್ಲಂಗಡಿ ಮೋಹಿಟೋ

ಬೇಸಿಗೆ ಕಾಲ ಬಂದರೆ ದೇಹಕ್ಕೆ ತಂಪು ನೀಡುವ ಪಾನೀಯಗಳ ಅಗತ್ಯ ಹೆಚ್ಚಾಗುತ್ತದೆ. ಸಾಮಾನ್ಯ ಜ್ಯೂಸ್‌ಗಳ ಬದಲು ಸ್ವಲ್ಪ ವಿಭಿನ್ನ ರುಚಿಯ ಪಾನೀಯ ಬೇಕೆಂದರೆ ಕಲ್ಲಂಗಡಿ ಮೋಹಿಟೋ ಟ್ರೈ ಮಾಡಿ. ಕಲ್ಲಂಗಡಿ ಹಣ್ಣಿನ ಸಿಹಿ ರುಚಿ, ಪುದೀನದ ಸುವಾಸನೆ ಮತ್ತು ನಿಂಬೆಹಣ್ಣಿನ ತಾಜಾತನ ಸೇರಿಕೊಂಡಾಗ ಈ ಪಾನೀಯ ಇನ್ನಷ್ಟು ರಿಫ್ರೆಶಿಂಗ್ ಆಗಿರುತ್ತದೆ.

ಬೇಕಾಗುವ ಪದಾರ್ಥಗಳು

ಕಲ್ಲಂಗಡಿ ಹಣ್ಣು – 1 ಕಪ್
ಪುದೀನ ಎಲೆ – 8 ರಿಂದ 10
ನಿಂಬೆ ರಸ – 1 ಚಮಚ
ಸಕ್ಕರೆ ಅಥವಾ ಹನಿ – 1 ರಿಂದ 2 ಚಮಚ
ಸ್ಪ್ರೈಟ್ ಅಥವಾ ಸ್ಪಾರ್ಕ್ಲಿಂಗ್ ವಾಟರ್ – ½ ಕಪ್
ಐಸ್ ಕ್ಯೂಬ್‌ಗಳು – ಅಗತ್ಯವಿದ್ದಷ್ಟು

ಮಾಡುವ ವಿಧಾನ

ಮೊದಲು ಒಂದು ಗ್ಲಾಸ್‌ನಲ್ಲಿ ಕಲ್ಲಂಗಡಿ ತುಂಡುಗಳು ಮತ್ತು ಪುದೀನ ಎಲೆಗಳನ್ನು ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ. ನಂತರ ಅದಕ್ಕೆ ನಿಂಬೆ ರಸ ಮತ್ತು ಸಕ್ಕರೆ ಸೇರಿಸಿ ಮತ್ತೆ ಚೆನ್ನಾಗಿ ಕಲಸಿ. ಬಳಿಕ ಐಸ್ ಕ್ಯೂಬ್‌ಗಳನ್ನು ಹಾಕಿ ಸ್ಪ್ರೈಟ್ ಅಥವಾ ಸ್ಪಾರ್ಕ್ಲಿಂಗ್ ವಾಟರ್ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.

ಇದೀಗ ತಂಪಾದ, ರುಚಿಯಾದ ಕಲ್ಲಂಗಡಿ ಮೋಹಿಟೋ ಸಿದ್ಧ. ಮೇಲಿನಿಂದ ಪುದೀನ ಎಲೆ ಹಾಗೂ ಕಲ್ಲಂಗಡಿ ತುಂಡಿನಿಂದ ಅಲಂಕರಿಸಿ ಸರ್ವ್ ಮಾಡಿದರೆ ಬೇಸಿಗೆಯಲ್ಲಿ ಕುಡಿಯಲು ಸೂಪರ್ ಡ್ರಿಂಕ್ ಆಗಿರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !