ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ತಾಯಿಗೆ ಹೃದಯಾಘಾತವಾಗಿದೆ.
ಬಹ್ರೇಚ್ನಲ್ಲಿ ವಾಸವಿದ್ದ ಜಾಕ್ವೆಲಿನ್ ತಾಯಿ ಕಿಮ್ ಫರ್ನಾಂಡಿಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸದ್ಯ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ‘ರಾಮ್ ಸೇತು’ ಹಾಗೂ ಸ್ಯಾಂಡಲ್ವುಡ್ ನಟ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ದಲ್ಲಿ ಐಟಂ ಸಾಂಗ್ವೊಂದಕ್ಕೆ ಜಾಕ್ವೆಲಿನ್ ಬಣ್ಣ ಹಚ್ಚಿದ್ದು, ಈ ಎರಡು ಚಿತ್ರಗಳು ತೆರೆ ಕಾಣಬೇಕಿದೆ.