Monday, October 27, 2025

2000 ರೂಪಾಯಿಗಾಗಿ ಜಗಳ: ಪ್ರಾಣ ಸ್ನೇಹಿತನನ್ನೇ ಕೊಂದ ಗೆಳೆಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅದೊಂದು ವಿಚಾರಕ್ಕೆ ಸ್ನೇಹಿತರ ನಡುವೆ ಶುರುವಾದ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿನಡೆದಿದೆ.

ಮಂಜುನಾಥ್ ಗೌಡರ್ (27) ಜೀವ ಕಳೆದುಕೊಂಡ ವ್ಯಕ್ತಿ. ಗಿರಿಯಾಲ್ ಗ್ರಾಮದ ನಿವಾಸಿ.

ಆರೋಪಿ ಹೆಸರು ದಯಾನಂದ್ ಗುಂಡ್ಲೂರ. ಈತ ಕೂಡ ಗಿರಿಯಾಲ್ ಗ್ರಾಮದ ನಿವಾಸಿ. ಮಂಜುನಾಥ್ ಹಾಗೂ ದಯಾನಂದ್ ಇಬ್ಬರು ಸ್ನೇಹಿತರಾಗಿದ್ದು ಜೊತೆಗೂಡಿಯೇ ಗಾರೆ ಕೆಲಸ ಮಾಡಿಕೊಂಡಿದ್ದರು. ಒಟ್ಟಿಗೆ ಬೆಳೆದ ಇಬ್ಬರು ಒಟ್ಟಿಗೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಮಂಜುನಾಥ್ ಕುಡಿತದ ದಾಸನಾಗಿದ್ದ. ಹೀಗಾಗಿ ದಯಾನಂದ್ ಕೆಲವು ದಿನಗಳಿಂದ ಕೆಲಸಕ್ಕೆ ಕರೆದುಕೊಂಡು ಹೋಗೋದನ್ನು ಬಿಟ್ಟಿದ್ದ. ವಾರದ ಹಿಂದೆ ಮತ್ತೆ ಕೆಲಸಕ್ಕೆ ಬರ್ತೇನಿ ಅಂತಾ ಹೇಳಿ ದಯಾನಂದ್ ಕಡೆ ಎರಡು ಸಾವಿರ ಹಣ ಸಾಲವಾಗಿ ಮಂಜುನಾಥ್ ಇಸ್ಕೊಂಡಿದ್ದ. ಆದರೆ ಮಂಜುನಾಥ್ ಕೆಲಸಕ್ಕೂ ಹೋಗಿರಲಿಲ್ಲ. ಹಣವನ್ನೂ ವಾಪಸ್ ನೀಡಿರಲಿಲ್ಲ. ಮೊನ್ನೆ ಸಂಜೆ ಹಣ ಕೊಡುವಂತೆ ದಯಾನಂದ್, ಮಂಜುನಾಥ್​​ಗೆ ಕೇಳಿದ್ದಾನೆ. ಆಗ ನಶೆಯಲ್ಲಿದ್ದ ಮಂಜುನಾಥ್ ಆರೋಪಿ ದಯಾನಂದ್​ಗೆ ಬೈಯ್ದಿದ್ದಾನೆ. ತಾಯಿ, ಕುಟುಂಬ ತೆಗೆದುಕೊಂಡು ಬೈಯ್ದಿದ್ದರಿಂದ ಇಬ್ಬರ ನಡುವೆ ರಾತ್ರಿ ಸಣ್ಣ ಗಲಾಟೆಯಾಗಿದೆ. ಸಿಟ್ಟಿಟ್ಟುಕೊಂಡ ದಯಾನಂದ್ ಬೆಳಗ್ಗೆ ಎದ್ದು ಮಂಜುನಾಥ್​ಗೆ ಕರೆ ಮಾಡಿ ಊರ ಹೊರಗಿನ ರಸ್ತೆಗೆ ಬಾ ಮಾತಾಡೋಣ ಎಂದಿದ್ದಾನೆ.

ಬೈಕ್ ಮೇಲೆ ಹೋಗಿದ್ದ ಮಂಜುನಾಥ್ ​ಗೆ ರಾತ್ರಿ ಬೈಯ್ದ ವಿಚಾರದ ಕುರಿತು ಕೇಳಿದ್ದಾನೆ. ಈ ವೇಳೆ ಮತ್ತೆ ಇಬ್ಬರ ನಡುವೆ ವಾಗ್ವಾದ ಆಗಿದೆ. ಆಗ ಮಂಜುನಾಥ್ ಮೇಲೆ ಕುಡಗೋಲಿನಿಂದ ದಯಾನಂದ್ ಹಲ್ಲೆ ಮಾಡಿದ್ದಾನೆ. ಹಲ್ಲೆ ಆಗ್ತಿದ್ದಂತೆ ತೀವ್ರ ರಕ್ತಸ್ರಾವವಾಗಿ ಕೆಳಗೆ ಬಿದ್ದಿದ್ದಾನೆ. ಇದನ್ನ ಗಮನಿಸಿದ ಸ್ಥಳೀಯರು ಓಡೋಡಿ ಬಂದು ಮಂಜುನಾಥ್​ನನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಇತ್ತ ಗೆಳೆಯನ ಸುದ್ದಿ ಗೊತ್ತಾಗ್ತಿದ್ದಂತೆಯೇ ದಯಾನಂದ್ ಪೊಲೀಸರಿಗೆ ಶರಣಾಗಿದ್ದ. ಘಟನೆ ಬಗ್ಗೆ ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

error: Content is protected !!