Monday, October 27, 2025

ನಾಳೆಯಿಂದ 12 ರಾಜ್ಯಗಳಲ್ಲಿ SIR ಶುರು: ಅಸ್ಸಾಂನಲ್ಲಿ ಏಕೆ ಪರಿಷ್ಕರಣೆ ಇಲ್ಲ? ಆಯೋಗ ಹೇಳಿದ್ದೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಾಳೆಯಿಂದ (ಅಕ್ಟೋಬರ್ 28)ರಿಂದ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ (SIR) 12 ರಾಜ್ಯಗಳಲ್ಲಿ ಪ್ರಾರಂಭವಾಗಲಿದೆ.

ಈ 12 ರಾಜ್ಯಗಳಲ್ಲಿ ಬಹುತೇಕ ಕಡೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಆದರೆ, ಅಸ್ಸಾಂನಲ್ಲಿ ಕೂಡ ಮುಂದಿನ ವರ್ಷವೇ ಚುನಾವಣೆ ಘೋಷಣೆಯಾಗಿದೆ. ಹೀಗಿದ್ದರೂ ಚುನಾವಣಾ ಆಯೋಗ ಅಸ್ಸಾಂ ರಾಜ್ಯವನ್ನು ಈ ಹಂತದ ಎಸ್​ಐಆರ್​​ನಲ್ಲಿ ಘೋಷಿಸಿಲ್ಲ.

ಇದೀಗ ಈ ಕುತೂಹಲಕ್ಕೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಅಸ್ಸಾಂನಲ್ಲಿ ಪೌರತ್ವ ವಿಷಯವು ಪ್ರಸ್ತುತ ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿದೆ. ಹೀಗಾಗಿ, ಅಸ್ಸಾಂನಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣೆಯನ್ನು ಪ್ರತ್ಯೇಕವಾಗಿ ಘೋಷಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ.

‘ಪೌರತ್ವ ಕಾಯ್ದೆಯಡಿ ಅಸ್ಸಾಂಗೆ ಪ್ರತ್ಯೇಕ ನಿಬಂಧನೆಗಳಿವೆ. ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಅಲ್ಲಿನ ಪೌರತ್ವ ಪರಿಶೀಲನೆ ಪೂರ್ಣಗೊಳ್ಳಲಿದೆ. ಜೂನ್ 24ರ SIR ಆದೇಶವು ಇಡೀ ದೇಶಕ್ಕೆ ಅನ್ವಯಿಸಿತ್ತು. ಆಗ ಇದು ಅಸ್ಸಾಂಗೆ ಅನ್ವಯಿಸಿರಲಿಲ್ಲ’ಎಂದು ಜ್ಞಾನೇಶ್ ಕುಮಾರ್ ಹೇಳಿದ್ದಾರೆ.

ಚುನಾವಣಾ ಆಯೋಗವು ಇಂದು ಎರಡನೇ ಹಂತದ ವಿಶೇಷ ತೀವ್ರ ಪರಿಷ್ಕರಣೆ (SIR) ಮತದಾರರ ಪಟ್ಟಿಗಳನ್ನು ಘೋಷಿಸಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಗೋವಾ, ಪುದುಚೇರಿ, ಛತ್ತೀಸ್‌ಗಢ, ಗುಜರಾತ್, ಕೇರಳ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಲಕ್ಷದ್ವೀಪದಲ್ಲಿ ನಾಳೆಯಿಂದಲೇ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಾರಂಭವಾಗಲಿದೆ.

error: Content is protected !!