ಹೊಸ ದಿಗಂತ ವರದಿ, ಅಂಕೋಲಾ:
ಕಾಶ್ಮೀರಿ ಸೇಬು ಸಾಗಿಸುತ್ತಿದ್ದ ಲಾರಿಯೊಂದು ತಾಲೂಕಿನ ಬಾಳೇಗುಳಿ ಗೋಪಾಲಕೃಷ್ಣ ದೇವಾಲಯದ ಬಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಪಲ್ಟಿಯಾದ ಪರಿಣಾಮ ಲಾರಿಯಲ್ಲಿದ್ದ ಸೇಬು ಬಾಕ್ಸ್ ಚೆಲ್ಲಾಪಿಲ್ಲಿಯಾಗಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.
ಕಾಶ್ಮೀರದಿಂದ ಮಂಗಳೂರಿಗೆ ಸೇಬು ಹಣ್ಣಿನ ಬಾಕ್ಸ್ ಗಳನ್ನು ಸಾಗಿಸುತ್ತಿದ್ದ ಆರ್ ಜೆ 19 ಜಿಎಚ್ 1749 ನೋಂದಣಿ ಸಂಖ್ಯೆಯ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ರಸ್ತೆ ತುಂಬ ಸೇಬು ಹಣ್ಣಿನ ಬಾಕ್ಸ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.
ಲಾರಿ ಚಾಲಕ ಮತ್ತು ಸಹಾಯಕ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದು ಹೆದ್ದಾರಿ ಗಸ್ತು ವಾಹನ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕ್ರೇನ್ ಸಹಾಯದಿಂದ ಲಾರಿಯನ್ನು ಮೇಲೆತ್ತಲಾಗಿದೆ.
ಸ್ಥಳೀಯ ಸಹಕಾರದಿಂದ ರಸ್ತೆಯಲ್ಲಿ ಬಿದ್ದಿರುವ ಸೇಬು ಹಣ್ಣಿನ ಬಾಕ್ಸ್ ಗಳನ್ನು ಎತ್ತಿ ಸರಿಯಾಗಿ ಜೋಡಿಸಿಡಲಾಗಿದ್ದು ಹಲವು ಬಾಕ್ಸ್ ಗಳಲ್ಲಿ ಇರುವ ಹಣ್ಣುಗಳು ಜಕಂ ಆಗಿರುವ ಸಾಧ್ಯತೆ ಇದೆ.
ಲಾರಿ ಪಲ್ಟಿಯಾಗಿ ಸೇಬು ಹಣ್ಣಿನ ಬಾಕ್ಸುಗಳು ರಸ್ತೆಯಲ್ಲಿ ಬಿದ್ದರೂ ಯಾರೂ ಸಹ ಕಳ್ಳತನಕ್ಕೆ ಪ್ರಯತ್ನ ಪಡದೆ ಸಹಾಯ ಸಹಕಾರ ನೀಡಿರುವ ಕುರಿತು ಲಾರಿ ಚಾಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

