Thursday, September 11, 2025

ಎಮರ್ಜೆನ್ಸಿ ಆಪರೇಷನ್‌! ನಮ್ಮ ಮೆಟ್ರೋದಲ್ಲಿ ಇದೇ ಮೊದಲ ಬಾರಿಗೆ ಅಂಗಾಗ ಸಾಗಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜಧಾನಿ ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ಎಲ್ಲರಿಗೂ ಗೊತ್ತಿರುವಂಥದ್ದೇ! ಆಂಬುಲೆನ್ಸ್‌ಗಳಿಗೆ ಜಾಗಬಿಡದ, ಜಾಗ ಬಿಟ್ಟರೂ ಹೋಗಲು ಜಾಗವಿಲ್ಲಂಥ ಪರಿಸ್ಥಿತಿ ಎದುರಾಗುತ್ತಿದೆ. ಈ ಸಮಸ್ಯೆ ಆಗಬಾರದು ಎಂದು ಇದೇ ಮೊದಲ ಬಾರಿಗೆ ನಮ್ಮ ಮೆಟ್ರೋದಲ್ಲಿ ಅಂಗಾಗ ಸಾಗಾಟ ಮಾಡಲಾಗಿದೆ. 

ಶುಕ್ರವಾರ ರಾತ್ರಿ ತುರ್ತು ಕಸಿಗಾಗಿ ಆಸ್ಪತ್ರೆಗೆ ಯಕೃತ್ ಸಾಗಾಟ ಮಾಡಲಾಗಿದೆ. ಟ್ರಾಫಿಕ್ ಜಾಮ್‍ನಿಂದ ತಪ್ಪಿಸಿಕೊಳ್ಳಲು ಮೆಟ್ರೋ ದಲ್ಲಿ ಯಕೃತ್ ಸಾಗಿಸಲಾಗಿದೆ. ವೈಟ್ ಫೀಲ್ಡ್ ನಿಲ್ದಾಣದಿಂದ ಆರ್‌ಆರ್‌ ನಗರಕ್ಕೆ ಸಾಗಾಟ ಮಾಡಲಾಗಿದೆ. ಆರ್‌ಆರ್‌ ನಗರ ಮೆಟ್ರೋ ನಿಲ್ದಾಣದಿಂದ ಆಂಬುಲೆನ್ಸ್ ಮೂಲಕ ಸ್ಪರ್ಶ ಆಸ್ಪತ್ರೆಗೆ ಯಕೃತ್‍ನ್ನು ಕೊಂಡೊಯ್ಯಲಾಗಿದೆ.

ಇದನ್ನೂ ಓದಿ