Wednesday, November 5, 2025

ಅಬ್ಬರಿಸುತ್ತಿರೋ ಚಂಡಮಾರುತಕ್ಕೆ ʼಮೊಂಥಾʼಎಂದು ಹೆಸರಿಟ್ಟವರು ಯಾರು? ಏನರ್ಥ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ‘ಮೊಂಥಾ’ ಚಂಡಮಾರುತದ ಪರಿಣಾಮಗಳು ಇಂದಿನಿಂದ ಗೋಚರಿಸಲು ಪ್ರಾರಂಭವಾಗಿದೆ. ಇಂದು ಸಂಜೆ ವೇಳೆಗೆ ಆಂಧ್ರಪ್ರದೇಶದ ಕಾಕಿನಾಡ ಬಳಿಯ ಮಚಲಿಪಟ್ಟಣ ಮತ್ತು ಕಳಿಂಗಪಟ್ಟಣಂ ನಡುವೆ ಚಂಡಮಾರುತವು ಭೂಕುಸಿತವನ್ನು ಉಂಟುಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹಾಗಾದರೆ ಈ ಚಂಡಮಾರುತಕ್ಕೆ ಮೊಂಥಾ ಎಂದು ಹೆಸರಿಟ್ಟವರು ಯಾರು, ಅದರ ಅರ್ಥವೇನು ಎಂಬುದನ್ನು ತಿಳಿದುಕೊಳ್ಳೋಣ. ಈ ಚಂಡಮಾರುತಕ್ಕೆ ಮೊಂಥಾ ಎಂದು ಥೈಲೆಂಡ್ ನಾಮಕರಣ ಮಾಡಿದೆ. ಥಾಯ್ ಭಾಷೆಯಲ್ಲಿ ಮೊಂಥಾ ಎಂದರೆ ‘ಪರಿಮಳಯುಕ್ತ ಹೂವು’ ಎಂದರ್ಥ.

ಆದರೆ ಇದು ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ಮತ್ತು ತೆಲಂಗಾಣದ ಕರಾವಳಿ ಪ್ರದೇಶಗಳಲ್ಲಿ ಸುಗಂಧ ಹರಡುವ ಹೂವಾಗಿ ಅಲ್ಲ ಬದಲಾಗಿ ಅಲ್ಲ, ಭಯ ಹಾಗೂ ಅನಿಶ್ಚಿತತೆಯನ್ನು ತಂದೊಡ್ಡುವ ಚಂಡಮಾರುತವಾಗಿ ಬರುತ್ತಿದೆ.

ಗಾಳಿಯ ವೇಗ ಗಂಟೆಗೆ 90 ರಿಂದ 100 ಕಿ.ಮೀ. ಆಗುವ ನಿರೀಕ್ಷೆಯಿದೆ. ಚಂಡಮಾರುತದ ಪ್ರಭಾವದಿಂದಾಗಿ ಅಕ್ಟೋಬರ್ 27 ಮತ್ತು 30 ರ ನಡುವೆ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಒಡಿಶಾ, ತಮಿಳುನಾಡು ಮತ್ತು ತೆಲಂಗಾಣದ ಕೆಲವು ಭಾಗಗಳಲ್ಲಿಯೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಸಮುದ್ರದಲ್ಲಿ ಎತ್ತರದ ಅಲೆಗಳು ಉಂಟಾಗುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

error: Content is protected !!