July 22, 2026
Wednesday, July 22, 2026
spot_img

ಯುದ್ಧ ಭಯದ ನಡುವೆಯೂ ಗುಡ್ ನ್ಯೂಸ್: 72 ವಿಮಾನಗಳ ಸಂಚಾರಕ್ಕೆ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಿದ್ಧತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯ ಸಂಘರ್ಷವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಹಿತದೃಷ್ಟಿಯಿಂದ ಇಂದು ಒಟ್ಟು 72 ವಿಮಾನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿವೆ.

ಪಶ್ಚಿಮ ಏಷ್ಯಾದಿಂದ ಬರುವ ಹಾಗೂ ಅಲ್ಲಿಗೆ ತೆರಳುವ ವಿಮಾನಗಳು ತುರ್ತು ಸೇವೆ ಒದಗಿಸಲಿವೆ. ಜೆಡ್ಡಾ ಮತ್ತು ಮಸ್ಕತ್ ಗಳ ನಡುವೆ ಸಂಚಾರ ಇರಲಿದೆ. ಪ್ರಮುಖವಾಗಿ ಭಾರತ ಮತ್ತು ಜೆಡ್ಡಾ ನಡುವೆಯೇ ಇಂದು 8 ವಿಮಾನಗಳು ಸಂಚರಿಸಲಿವೆ.

ಇದನ್ನೂ ಓದಿ:

ಏರ್ ಇಂಡಿಯಾ ವಿಮಾನಗಳು ದೆಹಲಿ, ಮುಂಬೈ ಹಾಗೂ ಏರ್ ಇಂಡಿಯಾ ಎಕ್ಸ್ ಪ್ರೆಸ್, ಬೆಂಗಳೂರು ಕೋಯಿಕೋಡ್ ಮತ್ತಿತರೆ ರಾಜ್ಯಗಳಿಗೆ ಪಶ್ಚಿಮ ಏಷ್ಯಾದಿಂದ ಆಗಮಿಸಲಿವೆ. ಈ ನಡುವೆ ಇಂಡಿಗೋ ಏರ್ ಲೈನ್ಸ್, ದುಬೈ ಪರಿಸ್ಥಿತಿ ನೋಡಿಕೊಂಡು ಅಲ್ಲಿಗೆ ವಿಮಾನಗಳ ಸೇವೆ ಆರಂಭಿಸಲು ಮುಂದಾಗಿದೆ. ವಿಮಾನಗಳ ಪ್ರಯಾಣದ ವೇಳಾಪಟ್ಟಿಯಲ್ಲಿ ಬದಲಾವಣೆಯಾಗುತ್ತಿರುವುದರಿಂದ ಪ್ರಯಾಣಿಕರಿಗೆ ಈ ಬಗ್ಗೆ ತಕ್ಷಣವೇ ಮಾಹಿತಿ ರವಾನಿಸಲಾಗುತ್ತದೆ. ಪ್ರಯಾಣಿಕರು ಸಹ ವಿಮಾನಯಾನ ಸಂಸ್ಥೆಯ ಅಂತರ್ಜಾಲವನ್ನು ವೀಕ್ಷಿಸುತ್ತಿರಬೇಕು ಎಂದೂ ಸಹ ಇಂಡಿಗೋ ವಿಮಾನಯಾನ ಸಂಸ್ಥೆ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !