Wednesday, November 5, 2025

ಕ್ಷುಲ್ಲಕ ಕಾರಣಕ್ಕೆ ಗಲಾಟೆ: ಐಆರ್‌ಬಿ ಯೋಧನಿಗೆ ಗುಂಡಿಕ್ಕಿ ಹತ್ಯೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ಭಾರತೀಯ ಮೀಸಲು ಬೆಟಾಲಿಯನ್(ಐಆರ್‌ಬಿ)ನ ಯೋಧನಿಗೆ ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಮೃತ ಯೋಧನನ್ನು ಚಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಆದರ್ಶ ಕಾಲೋನಿಯ ಯದುವಂಶ ನಗರದ ನಿವಾಸಿ ಅಜಯ್ ಯಾದವ್(25) ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಯಾದವ್ ಅವರನ್ನು ಗಿರಿದಿಹ್ ಜಿಲ್ಲೆಯಲ್ಲಿ ನಿಯೋಜಿಸಲಾಗಿತ್ತು ಮತ್ತು ಛತ್ ಪೂಜಾ ರಜೆಯ ಸಮಯದಲ್ಲಿ ಚಾಸ್‌ನಲ್ಲಿರುವ ತಮ್ಮ ಊರಿಗೆ ಆಗಮಿಸಿದ್ದರು.

ಯಾವುದೋ ಕ್ಷುಲ್ಲಕ ಕಾರಣಕ್ಕೆ ಜವಾನ ಮತ್ತು ಬಲರಾಮ್ ತಿವಾರಿ ಎಂಬ ಯುವಕನ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಮಾತಿನ ಚಕಮಕಿ ಗಲಾಟೆಯಾಗಿ ಮಾರ್ಪಟ್ಟಿತು. ಬಲರಾಮ್ ಆರಂಭದಲ್ಲಿ ಸ್ಥಳದಿಂದ ಹೊರಟುಹೋದರು. ಆದರೆ ಪಿಸ್ತೂಲಿನೊಂದಿಗೆ ಬಂದು ಜವಾನನ ಹೊಟ್ಟೆಗೆ ಮೂರು ಸುತ್ತು ಗುಂಡು ಹಾರಿಸಿದರು ಎಂದು ಚಾಸ್ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ(ಎಸ್‌ಡಿಪಿಒ) ಪ್ರವೀಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಯಾದವ್ ಅವರನ್ನು ಬೊಕಾರೊ ಜನರಲ್ ಆಸ್ಪತ್ರೆಗೆ(ಬಿಜಿಹೆಚ್) ಕರೆದೊಯ್ಯಲಾಯಿತು. ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

error: Content is protected !!