Wednesday, November 5, 2025

ಅಪ್ಪ-ಅಮ್ಮ ಹೊಡೆಯುತ್ತಾರೆ…ಮಕ್ಕಳ ಸಹಾಯವಾಣಿಗೆ ಬಂತು ಬಾಲಕಿಯ ಹೀಗೊಂದು ದೂರು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತನ್ನ ಪೋಷಕರಿಂದ ದೈಹಿಕ ಮತ್ತು ಮಾನಸಿಕ ದೌರ್ಜನ್ಯ ನಡೆಯುತ್ತಿದೆ ಎಂದು ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿ 10 ವರ್ಷದ ಬಾಲಕಿಯೊಬ್ಬರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಆರೋಪ ಮಾಡಿದ್ದಾಳೆ.

ಮಕ್ಕಳ ಸಹಾಯವಾಣಿ 1098ಗೆ ನೀಡಿದ ದೂರಿನಲ್ಲಿ ಆ ಬಾಲಕಿ ತನ್ನ ಪೋಷಕರು ಆಗಾಗ ನನ್ನನ್ನು ಹೊಡೆಯುತ್ತಾರೆ ಮತ್ತು ಗದರಿಸುತ್ತಾರೆ. ಇದರಿಂದಾಗಿ ಮನೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಹೇಳಿದ್ದಾಳೆ. ಈ ಕುರಿತಾದ ದೂರಿನ ನಂತರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪೊಲೀಸರಿಗೆ ಮಾಹಿತಿ ನೀಡಿದೆ.

ಬಳಿಕ ಮಹಿಳಾ ಅಧಿಕಾರಿಯ ನೇತೃತ್ವದ ಪೊಲೀಸ್ ತಂಡವು ಆ ಬಾಲಕಿಯ ಮನೆಗೆ ಭೇಟಿ ನೀಡಿ ಪರಿಸ್ಥಿತಿಯ ಬಗ್ಗೆ ವಿಚಾರಿಸಿದೆ. ಪೊಲೀಸರು ಬಾಲಕಿಯ ಪೋಷಕರಿಗೆ ಭವಿಷ್ಯದಲ್ಲಿ ಯಾವುದೇ ರೀತಿಯ ದೈಹಿಕ ಹಿಂಸೆ ನೀಡದಂತೆ, ಗದರದಂತೆ ಎಚ್ಚರಿಕೆ ನೀಡಿದ್ದಾರೆ. ಆಕೆಯ ಪೋಷಕರು ಇನ್ನುಮುಂದೆ ತಮ್ಮ ಮಗಳನ್ನು ಚೆನ್ನಾಗಿ ನಡೆಸಿಕೊಳ್ಳುವಂತೆ ಮನವೊಲಿಸಲು ಪ್ರಯತ್ನಿಸಲಾಗಿದೆ. ಆದರೆ, ಆ ಬಾಲಕಿ ತನ್ನ ಪೋಷಕರೊಂದಿಗೆ ವಾಸ ಮಾಡಲು ನಿರಾಕರಿಸಿದ್ದಾಳೆ. ನಂತರ, ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹುಡುಗಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು.

error: Content is protected !!