ಕಲಬುರಗಿಯ ಶಹಾಬಜಾರ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತರ ಆದೇಶ

ಹೊಸದಿಗಂತ ವರದಿ,ಕಲಬುರಗಿ

ಕಲಬುರಗಿ ನಗರದ ಶಹಾಬಜಾರ ನಾಕಾ ಹತ್ತಿರ ನಿಜಶರಣ ಅಂಬಿಗರ ಚೌಡಯ್ಯನವರ ಕಟ್‍ಔಟ್ ಕಟ್ಟೆ ಕಟುತ್ತಿರುವ ಕಾಲಕ್ಕೆ ಕೋಲಿ ಸಮಾಜ ಮತು ರಜಪೂತರ ಸಮಾಜದವರ ಮದ್ಯೆ ತಂಟೆ ತಕರಾರು ಉಂಟಾಗಿರುವ ಹಿನ್ನೆಲೆಯಲ್ಲಿ ಕಾನೂನು ಮತು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುವಂತೆ ಕಲಬುರಗಿಯ ನಗರದ ಚೌಕ್ಮ ತ್ತು ಆರ್.ಜಿ. ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕೆಳಕಂಡ ಸ್ಥಳಗಳಲ್ಲಿ ಇದೇ ಜನವರಿ 20ರ ರಾತ್ರಿ 8 ಗಂಟೆಯಿಂದ ಜನವರಿ 22ರ ರಾತ್ರಿ 10 ಗಂಟೆಯವರೆಗೆ ಸಿ.ಆರ್.ಪಿ.ಸಿ. ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್. ರವಿಕುಮಾರ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.
ಕಲಬುರಗಿ ನಗರದ ಶಹಾಬಜಾರ ಬಸ್‍ನಿಲ್ದಾಣ, ಶಹಾಬಜಾರ ಬಸ್‍ನಿಲ್ದಾಣದಿಂದ ಲಾಲ ಹನುಮಾನ ಗುಡಿಯವರೆಗೆ, ಪ್ರಕಾಶ ಚಿತ್ರಮಂದಿರವರೆಗೆ, ಶಹಾಬಜಾರ ಬಸ್‍ನಿಲ್ದಾಣದಿಂದ ಲಾಲಗೆರಿ ಕ್ರಾಸ್, ಸರ್ಕಾರಿ ಶಾಲೆ, ಸುಭಾಷ ಗಲ್ಲಿ, ಶೆಟ್ಟಿ ಚಿತ್ರಮಂದಿರ, ಶಹಾಬಜಾರ ಸಂಪೂರ್ಣ ಏರಿಯಾ, ಶಹಾಬಜಾರ್ ಬಸ್‍ನಿಲ್ದಾಣದಿಂದ ಮಲಂಗ ಹೊಟೇಲ್, ಶಹಾಬಜಾರ ಖಾದ್ರಿ ಚೌಕ್ ಹಾಗೂ ಆಳಂದ ರಿಂಗ್ ರೋಡವರೆಗೆ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 31 ರನ್ವಯ ಈ ಆದೇಶ ಹೊರಡಿಸಲಾಗಿದೆ.
ಡಿಸಿಪಿ (ಕಾ-ಸು) ಕಲಬುರಗಿ ನಗರ ಹಾಗೂ ಅವರ ಅಧೀನ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಈ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ಕ್ರಮ ಜರುಗಿಸಬೇಕು. ಈ ಆದೇಶವನ್ನು ಉಲ್ಲಂಘಿಸಿದ್ದಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತರು ಅವರು
ತಮ್ಮ ಆದೇಶದಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!