ಸಾರಿಗೆ ಇಲಾಖೆ, ಶ್ರೀರಾಮುಲು ಅವಧಿಯಲ್ಲಿ ಮಾದರಿ: ಪಿ.ಕೃಷ್ಣ ಮೂರ್ತಿ ವಿಶ್ವಾಸ

ಹೊಸ ದಿಗಂತ ವರದಿ, ಬಳ್ಳಾರಿ:

ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು, ಅನುಭವಿ ರಾಜಕಾರಣಿಗಳು, ಜನ ನಾಯಕರಾಗಿದ್ದು, ಅವರಿಗೆ ಜಿಲ್ಲಾ ಉಸ್ತುವಾರಿ ನೀಡಿರುವುದು ಸಂತಸ ಮೂಡಿಸಿದೆ, ಶ್ರೀರಾಮುಲು ಅವದಿಯಲ್ಲಿ ಸಾರಿಗೆ ಇಲಾಖೆ ಮಾದರಿಯಾಗಲಿದೆ ಎಂದು ಬಿಜೆಪಿ ಹಿರೀಯ ಮುಖಂಡ, ನಿವೃತ್ತ ಪಿಎಸ್ಐ ಪಿ.ಕೃಷ್ಣಮೂರ್ತಿ ಅವರು ಹೇಳಿದರು.
ನಗರದ ಅಹಂಬಾವಿ ಪ್ರದೇಶದ ಸಚಿವರ ನಿವಾಸದಲ್ಲಿ ಗುರುವಾರ ನೂತನ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರಿಗೆ ಅಭಿನಂದಿಸಿ, ಮಾತನಾಡಿದರು. ಈ ಹಿಂದೆ ಶ್ರೀರಾಮುಲು ಅವರು ಆರೋಗ್ಯ ಸಚಿವರಿದ್ದಾಗ, 108 ಆ್ಯಂಬುಲನ್ಸ್ ವಾಹನ ಸೌಲಭ್ಯ ಜಾರಿಗೊಳಿಸಿ, ಬಡ ಜನರ ಸಂಜೀವಿನಿಯಾಗಿ ಕೆಲಸ ನಿರ್ವಹಿಸಿ, ಮಾದರಿ ಸಚಿವರಾಗಿ ಹೊರ ಹೊಮ್ಮಿದ್ದರು, ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ಸಾಕಷ್ಟು ಬದಲಾವಣೆಗಳನ್ನು ತರುವ ಮೂಲಕ ರಾಜ್ಯದ ಗಮನಸೆಳೆದಿದ್ದಾರೆ. ಸಾರಿಗೆ ಇಲಾಖೆ ಸಚಿವರಾದ ಬಳಿಕ ಇಲಾಖೆಗೆ ಹೊಸ ಸ್ಪರ್ಷ ನೀಡಲು‌ ಮುಂದಾಗಿದ್ದು, ಈಗಾಗಲೇ ಡೀಸೆಲ್ ಸಮಸ್ಯೆಗೆ ಕಡಿವಾಣ ಹಾಕಲು ಎಲೆಕ್ಟ್ರಿಕ್‌ ಬಸ್ ಗಳನ್ನು ಖರೀದಿಸಿದ್ದಾರೆ, ಶೀಘ್ರದಲ್ಲೇ ಬಸ್ ಗಳು ರಸ್ತೆಗೆ ಇಳಿಯಲಿವೆ, ನಮ್ಮ ಜನನಾಯಕ ಶ್ರೀರಾಮುಲು ಅವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ಕಳೆದ ಸುಮಾರು ವರ್ಷಗಳಿಂದ ನಾನಾ ಕಾರಣಗಳಿಂದ ಕೈ ತಪ್ಪಿತ್ತು, ಅದು, ಈಗ ಈಡೇರಿರುವುದು ಸಂತಸ ಮೂಡಿಸಿದೆ, ಮುಂಬರುವ ಎಲ್ಲ ಚುನಾವಣೆಯಲ್ಲಿ ಕಮಲ ಅರಳಲಿದೆ ಎಂದರು. ಈ ಸಂದರ್ಭದಲ್ಲಿ ವಿವಿಧ ಮುಖಂಡರು ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!