Tuesday, November 4, 2025

Evil Eye ಪೆಂಡೆಂಟ್ ಧರಿಸೋದು ಒಳ್ಳೆದಾ? ಜೋತಿಷ್ಯ ಶಾಸ್ತ್ರ ಏನು ಹೇಳುತ್ತೆ?

ನಮ್ಮ ದೇಶದಲ್ಲಿ “ದೃಷ್ಟಿ ತಗುಲುತ್ತದೆ” ಎಂಬ ನಂಬಿಕೆ ಪುರಾತನ ಕಾಲದಿಂದಲೇ ಪ್ರಚಲಿತದಲ್ಲಿದೆ. ಹೊಸ ಮನೆ, ಹೊಸ ಕಾರು, ಹೊಸ ಕೆಲಸ ಅಥವಾ ನೂತನ ಯಶಸ್ಸು ಬಂದಾಗ ಜನರ ಬಾಯಿಮಾತಿನಿಂದ ಅಥವಾ ಕಣ್ಣಿನ ದೃಷ್ಟುಯಿಂದ (evil eye) ಹಾನಿ ಮಾಡುತ್ತಾರೆ ಅನ್ನೋ ನಂಬಿಕೆ ಇದೆ. ಇದು ಎಷ್ಟು ಸತ್ಯ ಎಷ್ಟು ಸುಳ್ಳು ಅನ್ನೋದು ಇದುವರೆಗೂ ಯಾರು ಕಂಡು ಹಿಡಿದಿಲ್ಲ. ಆದ್ರೂ ಇವುಗಳಿಂದ ರಕ್ಷಿಸೋಕೆ ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ. ಇತ್ತೀಚಿನ ಟ್ರೆಂಡ್ ಆಗಿ ಜನರು ಈವಿಲ್ ಐ ಪೆಂಡೆಂಟ್ ಅಥವಾ ನಜರ್‌ ಬಟ್ಟು ಧರಿಸುವುದನ್ನು ಶುಭವೆಂದು ನಂಬುತ್ತಿದ್ದಾರೆ.

ಜೋತಿಷ್ಯ ಶಾಸ್ತ್ರದ ಪ್ರಕಾರ, ಈವಿಲ್ ಐ ಪೆಂಡೆಂಟ್ ಧರಿಸುವುದು ನಕಾರಾತ್ಮಕ ಶಕ್ತಿಗಳನ್ನು ತಡೆಗಟ್ಟಲು ಸಹಾಯಕ ಎಂದು ಹೇಳಲಾಗಿದೆ. ಇದು ಧಾರಕನ ಶಕ್ತಿಕ್ಷೇತ್ರವನ್ನು (energy aura) ಬಲಗೊಳಿಸಿ, ಹೊರಗಿನ ನಕಾರಾತ್ಮಕ ಆಲೋಚನೆಗಳ ಪ್ರಭಾವವನ್ನು ಕಡಿಮೆಮಾಡುತ್ತದೆ. ನೀಲಿ ಬಣ್ಣದ ಕಣ್ಣಿನ ಆಕಾರದ ಈ ಪೆಂಡೆಂಟ್ ಶಾಂತಿ, ಸ್ಪಷ್ಟತೆ ಮತ್ತು ಸಕಾರಾತ್ಮಕ ಚಿಂತನೆಗೆ ಪ್ರೇರಣೆ ನೀಡುತ್ತದೆ.

ಆದರೆ, ಈವಿಲ್ ಐ ಧರಿಸುವ ಮೊದಲು ಅದನ್ನು ಶುದ್ಧೀಕರಿಸಿ ಮತ್ತು ನಂಬಿಕೆಯೊಂದಿಗೆ ಧರಿಸುವುದು ಮುಖ್ಯ. ಕೇವಲ ಫ್ಯಾಷನ್‌ನಾಗಿ ಧರಿಸುವುದಕ್ಕಿಂತ, ಅದರ ಆಧ್ಯಾತ್ಮಿಕ ಅರ್ಥವನ್ನು ಅರಿತು ಧರಿಸಿದರೆ ಅದರಿಂದ ಉತ್ತಮ ಫಲ ಸಿಗುತ್ತದೆ ಎನ್ನುತ್ತಾರೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

error: Content is protected !!