Monday, November 3, 2025

Oral Hygiene | ಪದೇ ಪದೇ ಉಪ್ಪುನೀರಿನಿಂದ ಬಾಯಿ ಮುಕ್ಕಳಿಸುತ್ತೀರಾ? ಹಾಗಿದ್ರೆ ಈ ಸ್ಟೋರಿ ಓದಿ

ನಿತ್ಯವೂ ಉಪ್ಪಿನ ನೀರಿನಿಂದ ಬಾಯಿ ಮುಕ್ಕಳಿಸುವುದು ಒಂದು ಸರಳ ಮತ್ತು ಶುದ್ಧ ಅಭ್ಯಾಸ ಎಂದು ಅನೇಕರು ಭಾವಿಸುತ್ತಾರೆ. ಗಂಟಲು ನೋವು, ಬ್ಯಾಕ್ಟೀರಿಯಾ ನಿವಾರಣೆ ಅಥವಾ ದುರ್ವಾಸನೆ ನಿವಾರಣೆಗೆ ಇದು ಸಹಾಯಕ ಎಂಬ ನಂಬಿಕೆ ಇದೆ. ಆದರೆ ವೈದ್ಯರ ಪ್ರಕಾರ, ಪದೇಪದೇ ಉಪ್ಪಿನ ನೀರಿನಿಂದ ಬಾಯಿ ಮುಕ್ಕಳಿಸುವುದು ಕೆಲವೊಮ್ಮೆ ಬಾಯಿ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಅತಿಯಾದ ಪ್ರಮಾಣದಲ್ಲಿ ಉಪ್ಪು ನೀರಿನ ಬಳಕೆ ಬಾಯಿಯ ನೈಸರ್ಗಿಕ ಸಮತೋಲನವನ್ನು ಕೆಡಿಸಬಹುದು.

  • ಬಾಯಿ ಒಣಗುವುದು: ಉಪ್ಪು ನೀರು ಬಾಯಿಯ ತೇವಾಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಲಾಲಾರಸದ ಪ್ರಮಾಣ ಕಡಿಮೆಯಾಗುತ್ತೆ ಮತ್ತು ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲವಾಗುತ್ತದೆ.
  • ಹಲ್ಲಿನ ಇನಾಮೆಲ್ ಹಾನಿ: ಉಪ್ಪಿನ ಅತಿ ಪ್ರಮಾಣದ ಸಂಸರ್ಕ ಹಲ್ಲಿನ ಮೇಲಿನ ಇನಾಮೆಲ್ ಪದರವನ್ನು ದುರ್ಬಲಗೊಳಿಸುತ್ತದೆ, ಹೀಗಾಗಿ ಹಲ್ಲುಗಳು ಸಂವೇದನಾಶೀಲವಾಗಬಹುದು.
  • ಬಾಯಿಯ ಒಳಪದರ ಸುಡುವಿಕೆ: ಅತಿಯಾದ ಉಪ್ಪು ನೀರಿನಿಂದ ಬಾಯಿ ಒಳಭಾಗದ ಚರ್ಮ ಸುಡುವಂತಹ ಅಥವಾ ಕಿರಿಕಿರಿಯಾಗುವ ಸಾಧ್ಯತೆ ಇದೆ.
  • ಲಾಲಾರಸ ಸಮತೋಲನ ಕೆಡಸು: ಉಪ್ಪಿನ ನೀರು ಬಾಯಿಯ ಪಿಎಚ್‌ ಮಟ್ಟವನ್ನು ಬದಲಾಯಿಸಿ, ನೈಸರ್ಗಿಕ ಲಾಲಾರಸದ ರಕ್ಷಣಾ ಶಕ್ತಿಯನ್ನು ಕಡಿಮೆ ಮಾಡುತ್ತದೆ.

ಒಮ್ಮೆ ಒಂದು ಬಾರಿ ಉಪ್ಪಿನ ನೀರಿನಿಂದ ಬಾಯಿ ಮುಕ್ಕಳಿಸುವುದು ಒಳ್ಳೆಯದು, ಆದರೆ ಅದನ್ನು ದಿನನಿತ್ಯದ ಅಭ್ಯಾಸವನ್ನಾಗಿ ಮಾಡುವುದು ಆರೋಗ್ಯಕರವಲ್ಲ. ವೈದ್ಯರ ಸಲಹೆಯಂತೆ ಮಿತವಾಗಿ ಮಾತ್ರ ಬಳಸುವುದು ಉತ್ತಮ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

error: Content is protected !!