ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಐಎಂಐಎಂ ಮುಖ್ಯಸ್ಥ, ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿ ತೆರಳುತ್ತಿದ್ದ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದೆ.
ಚುನಾವಣಾ ಕಾರ್ಯಕ್ರಮದ ಬಳಿಕ ಉತ್ತರ ಪ್ರದೇಶದ ಮೀರತ್‌ನಿಂದ ದೆಹಲಿಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.
ಈ ಕುರಿತು ಮಾಹಿತಿ ನೀಡಿದ ಅವರು, ಕೆಲವು ಸಮಯದ ಹಿಂದೆ, ನನ್ನ ಕಾರಿನ ಮೇಲೆ ಚಿಜಾರ್ಸಿ ಟೋಲ್ ಗೇಟ್ ಮೇಲೆ ಗುಂಡು ಹಾರಿಸಲಾಯಿತು. 4 ಸುತ್ತು ಗುಂಡು ಹಾರಿಸಲಾಗಿದೆ. 3-4 ಜನರು ಗುಂಡು ಹಾರಿಸಿ ಶಸ್ತ್ರಾಸ್ತ್ರಗಳನ್ನ ಅಲ್ಲಿಯೇ ಬಿಟ್ಟು ಓಡಿಹೋಗಿದ್ದಾರೆ. ಈ ವೇಳೆ ನನ್ನ ಕಾರು ಪಂಕ್ಚರ್ ಆಯಿತು. ಆದರೆ ನಾನು ಬೇರೆ ಕಾರಿನ ಮೂಲಕ ಸುರಕ್ಷಿತವಾಗಿ ತೆರಳಿದ್ದೇನೆ ಎಂದು ಮಾಹಿತಿತ್ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!