ದಿಗಂತ ವರದಿ ಬಾಗಲಕೋಟೆ:
ಶಾಲಾ ಮಕ್ಕಳ ಹಿಜಾಬ್ ಧರಿಸುವ ವಿಚಾರವನ್ನು ಕೆಲವರು ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರು ಆಕ್ರೋಶ ಭರಿತವಾಗಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಶಾಲೆಗೆ ಹೋಗುವ ಮಗು ಶಿಕ್ಷಣ ಕಲಿಯಲಿಕ್ಕೆ ಹೋಗುತ್ತದೆ. ನನ್ನದು ಯಾವ ಧರ್ಮ? ಧರ್ಮದ ವ್ಯವಸ್ಥೆ ಅಲ್ಲಿ ಏನು ಮಾಡಬೇಕು? ಅನ್ನೋದು ಆಗಬಾರದು ಎಂದರು.
ಜಾತಿ, ಧರ್ಮ ಶಾಲೆಯಲ್ಲಿ ಬಂದ್ರೆ ಮಕ್ಕಳ ಭಾವನೆಗೆ ದೊಡ್ಡ ಸಮಸ್ಯೆ ಆಗಲಿದೆ.ನಾವು ಮನುಷ್ಯರು ಶಾಲೆಯಲ್ಲಿರುವ ಎಲ್ಲ ಮಕ್ಕಳು ಒಂದೇ ರೀತಿ ಇದ್ದರೆ ಯಾವ ಸಮಸ್ಯೆಯೂ ಆಗುವುದಿಲ್ಲ ಎಂದರು.
ಶಿಸ್ತಿನಿಂದ ಯಾವ ಯೂನಿಫಾರ್ಮ್ ಧರಿಸಬೇಕು ಎಂದು ಶಾಲೆಯಲ್ಲಿ ಹೇಳಲಾಗುತ್ತದೆ. ಆ ಯೂನಿಫಾರ್ಮ್ ಹಾಕಿಕೊಂಡರೆ ಯಾವುದೇ ಸಮಸ್ಯೆ ಇರುವುದಿಲ್ಲ. ಕೆಲವು ರಾಜಕಾರಕ್ಕಾಗಿ ಇದನ್ನ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಉಗ್ರವಾಗಿ ಖಂಡಿಸಿದರು.
ಹಿಂದೂ-ಮುಸ್ಲಿಮರು ಎಲ್ಲರೂ ಶಾಲೆಯಲ್ಲಿ ಸಹೋದರ-ಸಹೋದರಿಯಂತೆ ಇರಬೇಕು ಎಂದರು.