ಗರ್ಭಿಣಿಯರು ದಪ್ಪ ಆದರೆ ಅವರಿಗೆ ಯಾರೂ ಯಾಕೆ ತೂಕ ಹೆಚ್ಚಾಗಿದ್ದೀಯ ಎಂದು ಕೇಳೋದಿಲ್ಲ. ಮಗುವಿನ ಬೆಳವಣಿಗೆಗೆ ಗರ್ಭಿಣಿ ತೂಕ ಹೆಚ್ಚಾಗುತ್ತದೆ. ಆದರೆ ಕೆಲವೊಮ್ಮೆ ಗರ್ಭಿಣಿಯರು ಮಾಡುವ ತಪ್ಪಿನಿಂದ ಅಂದುಕೊಂಡಿದ್ದಕ್ಕಿಂತ ಹೆಚ್ಚೇ ತೂಕ ಏರುತ್ತದೆ. ಇದಕ್ಕೆ ಏನು ಮಾಡೋದು ನೋಡಿ..
- ಸರಿಯಾದ ತೂಕದಿಂದ ಪ್ರೆಗ್ನೆನ್ಸಿ ಆರಂಭವಾಗಲಿ. ನೀವು ಹೆಚ್ಚು ತೂಕ ಮೊದಲೇ ಹೊಂದಿದ್ದರೆ ಸ್ವಲ್ಪ ಸಣ್ಣ ಆದ ನಂತರ ಮಗುವಿಗೆ ಪ್ಲ್ಯಾನ್ ಮಾಡಿ.
- ಬ್ಯಾಲೆನ್ಸ್ ಆದ ಆಹಾರ ತಿನ್ನಿ, ಒಂದೇ ಸಮನೆ ತಿನ್ನುವುದರಿಂದ ಬೇರೆ ಸಮಸ್ಯೆ ಎದುರಾಗುತ್ತದೆ.ದಿನಕ್ಕೆ ಐದು ಹೊತ್ತು ತಿಂದರೂ ಪರವಾಗಿಲ್ಲ.
- ಹೆಚ್ಚು ನೀರು ಕುಡಿಯಿರಿ. ದೇಹಕ್ಕೆ ನೀರಿನ ಅವಶ್ಯ ಹೆಚ್ಚಿದೆ.
- ಕ್ರೇವಿಂಗ್ಸ್ ಗರ್ಭಿಣಿಯರಲ್ಲಿ ಸಾಮಾನ್ಯ. ಆದರೆ ಅನಾರೋಗ್ಯಕ್ಕೆ ತುತ್ತಾಗುವಂಥ ಆಹಾರ ಸೇವನೆಗೆ ಮಿತಿ ಇರಲಿ.
- ಪ್ರೆಗ್ನೆನ್ಸಿ ಕಾಯಿಲೆ ಅಲ್ಲ, ಬೇರೆ ರೀತಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆಗದಿದ್ದರೂ ಸಿಂಪಲ್ ಆಗಿ ವಾಕ್, ಮನೆಕೆಲಸ ಮಾಡಿ.
- ಕೆಲಸಕ್ಕೆ ಹೋಗುವವರಾದರೆ, ಗರ್ಭಿಣಿ ಎಂದು ಕೆಲಸ ಬಿಟ್ಟುಬಿಡಬೇಡಿ. ನೀವು ಆಕ್ಟೀವ್ ಆಗಿ ಇರುವುದು ಮುಖ್ಯ.
- ತೂಕದ ಬಗ್ಗೆ ವೈದ್ಯರ ಬಳಿ ಚರ್ಚೆ ಮಾಡಿ. ಎಷ್ಟು ಟ್ರೈಮಿಸ್ಟರ್‌ಗೆ ಎಷ್ಟು ತೂಕ ಹೆಚ್ಚಾಗಬೇಕು ಅವರ ಬಳಿ ಮಾಹಿತಿ ಕೇಳಿ.
- ತೂಕದ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಳ್ಳಬೇಡಿ. ಪ್ರೆಗ್ನೆನ್ಸಿ ಕಡೆ ಟ್ರೈಮಿಸ್ಟರ್‌ನಲ್ಲಿ ನೀರಿನಿಂದ ತೂಕ ಹೆಚ್ಚುತ್ತದೆ. ಡೆಲಿವರಿ ನಂತರ ಈ ತೂಕ ಕಡಿಮೆ ಆಗುತ್ತದೆ.
- ಮಾನಸಿಕವಾಗಿ ಆರೋಗ್ಯವಾಗಿರಿ. ಒತ್ತಡ ಬೇಡ, ಆಗಾಗ ಎದ್ದು ಓಡಾಡಿ. ಧ್ಯಾನ ಮಾಡಿ.