ರಣಜಿ ಟ್ರೋಫಿ ಟೂರ್ನಿ: ಕರ್ನಾಟಕ ತಂಡ ಪ್ರಕಟ, ಮನೀಶ್‌ ಪಾಂಡೆ ಕ್ಯಾಪ್ಟನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2022ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಮೊದಲ ಹಂತಕ್ಕೆ ಕರ್ನಾಟಕ ಕ್ರಿಕೆಟ್‌ ತಂಡ ಪ್ರಕಟಗೊಂಡಿದ್ದು, ಈ ವರ್ಷವೂ ತಂಡ ನಾಯಕನಾಗಿ ಬ್ಯಾಟರ್‌ ಮನೀಶ್‌ ಪಾಂಡೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ಕ್ರಿಕೆಟ್‌ ತಂಡ 20 ಸದಸ್ಯರನ್ನು ಒಳಗೊಂಡಿದ್ದು, ಉಪನಾಯಕನಾಗಿ ಆರ್.‌ ಸಮರ್ಥ್‌ ನೇಮಕಗೊಂಡಿದ್ದಾರೆ. ಫೆ.17ರಿಂದ ಮಾ.15ರವರೆಗೆ ಟೂರ್ನಿ ನಡೆಯಲಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಟ್ವಿಟರ್‌ ಮೂಲಕ ತಂಡವನ್ನು ಘೋಷಿಸಿದ್ದು, ಮನೀಶ್‌ ಪಾಂಡೆ ಜೊತೆಗೆ ಅನುಭವಿ ಬ್ಯಾಟ್ಸ್‌ಮನ್‌ ಆರ್‌ ಸಮರ್ಥ್‌ ಅವರನ್ನು ಉಪನಾಯಕನನ್ನಾಗಿ ನೇಮಕ ಮಾಡಿದೆ. ತಂಡದಲ್ಲಿ ಕರುಣ್‌ ನಾಯರ್‌, ದೇವದತ್‌ ಪಡಿಕ್ಕಲ್‌, ಶ್ರೇಯಸ್‌ ಗೋಪಾಲ್‌ ಮತ್ತು ಪ್ರಸಿಧ್‌ ಕೃಷ್ಣ ಇದ್ದಾರೆ.

ಫೆ. 10ರಂದು ತಂಡ ಚೆನ್ನೈ ತಲುಪಲಿದ್ದು, 5 ದಿನಗಳ ಕ್ವಾರಂಟೈನ್‌ ಬಳಿಕ ಎರಡು ದಿನ ಅಭ್ಯಾಸಕ್ಕೆ ಅವಕಾಶ ಸಿಗಲಿದೆ. ಪಂದ್ಯಕ್ಕೆ ಗರಿಷ್ಠ 10 ಸಹಾಯಕ ಸಿಬ್ಬಂದಿಯನ್ನು ಕರೆದೊಯ್ಯಲು ಬಿಸಿಸಿಐ ಅನುಮತಿ ನೀಡಿದೆ.
ಕರ್ನಾಟಕ ತಂಡದಲ್ಲಿ ಮನೀಶ್‌ ಪಾಂಡೆ(ನಾಯಕ), ಆರ್‌.ಸಮರ್ಥ್‍, ಮಯಾಂಕ್ ಅಗರ್‌ವಾಲ್‌, ಕರುಣ್ ನಾಯರ್‌, ದೇವದತ್ ಪಡಿಕ್ಕಲ್‌, ಸಿದ್ಧಾರ್ಥ್ ಕೆ.ವಿ., ಡಿ.ನಿಶ್ಚಲ್‌, ಅನೀಶ್ವರ್‌ ಗೌತಮ್‌, ಶುಭಾಂಗ್‌, ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌, ಸುಚಿತ್‌, ಕಾರ್ಯಪ್ಪ, ಶರತ್‌ ಶ್ರೀನಿವಾಸ್‌, ಬಿ.ಆರ್‌.ಶರತ್‌, ಪ್ರಸಿದ್ಧ್ ಕೃಷ್ಣ, ರೋನಿತ್‌ ಮೋರೆ, ವೆಂಕಟೇಶ್‌, ವೈಶಾಖ್‌, ವಿದ್ಯಾಧರ್‌ ಪಾಟೀಲ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!