ಕೇಸರಿ-ಹಿಜಾಬ್ ಜಟಾಪಟಿಯಲ್ಲಿ ಘೋಷಣೆ ಕೂಗಿದ ವಿದ್ಯಾರ್ಥಿನಿಗೆ 5 ಲಕ್ಷ ಬಹುಮಾನ: ಎಸ್ಪಿಗೆ ದೂರು

ಹೊಸದಿಗಂತ ವರದಿ,ಮಂಡ್ಯ :

ಕೇಸರಿ-ಹಿಜಾಬ್ ಜಟಾಪಟಿಯಲ್ಲಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ವಿದ್ಯಾರ್ಥಿನಿಗೆ 5 ಲಕ್ಷ ಬಹುಮಾನ ಘೋಷಣೆ ಮಾಡಿರುವ ಜಮಾತ್ ಏ ಹಿಂದ್ ಸಂಘಟನೆ ವಿರುದ್ಧ ನರೇಂದ್ರ ಮೋದಿ ವಿಚಾರ್ ಮಂಚ್ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ವಿದ್ಯಾರ್ಥಿಗಳ ನಡುವೆ ನಡೆಯುತ್ತಿರುವ ಸಮವಸದ ಸಮಾನತೆಯ ಚಳವಳಿಯಲ್ಲಿ ಕೆಲ ವಿದೇಶಿ ಪ್ರೇರಿತ ಪ್ರತ್ಯೇಕತಾವಾದಿ ಸಂಘಟನೆಗಳು, ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ವಿದ್ಯಾರ್ಥಿನಿಗೆ 5 ಲಕ್ಷ ಬಹುಮಾನ ಘೋಷಣೆ ಮಾಡಿರುವುದು ನಿಜಕ್ಕೂ ಅತಂತಕದ ವಿಚಾರ. ಕರ್ನಾಟಕದಲ್ಲಿ ನಡೆಯುತ್ತಿರುವ ಸಮವಸ ವಿವಾದದ ಹಿಂದೆ ಈ ಸಂಘಟನೆಯ ಕೈವಾಡವಿರಬಹುದು ಎನ್ನುವ ಅನುಮಾನವಿದೆ.
ವಿದೇಶಿ ಹಣಕಾಸು ನೆರವು ಪಡೆದು ಕೋಮು ಗಲಭೆ ನಡೆಸುವ ಸಾಧ್ಯತೆಯಿದೆ. ಇಂತಹ ಸಂಘಟನೆಗಳು ವಿಷ ಬೀಜ ಬಿತ್ತುತ್ತಿರುವ ಶಂಕೆಯಿದ್ದು, ಈ ಸಂಘಟನೆಯ ಹಣಕಾಸು ವ್ಯವಹಾರ ಹಾಗೂ ಇನ್ನಿತರೆ ಚಟುವಟಿಕೆಯ ಬಗ್ಗೆ ಕೂಲಂಕುಷವಾಗಿ ಕಾನೂನು ರೀತ್ಯಾ ತನಿಖೆ ನೆಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ನರೇಂದ್ರ ಮೋದಿ ವಿಚಾರ್ ಮಂಚ್ ರಾಜ್ಯ ಕಾರ್ಯದರ್ಶಿ ಸಿ.ಟಿ.ಮಂಜುನಾಥ್, ಶಿವಕುಮಾರ ಆರಾಧ್ಯ, ಹೊಸಹಳ್ಳಿ ಶಿವು, ಶಶಿಕುಮಾರ್ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!