ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೆಮಿಮಾ ರಾಡ್ರಿಗಸ್ ಭರ್ಜರಿ ಶತಕದ ನೆರವಿನಿಂದ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಗೆದ್ದು ಫೈನಲ್ ಗೆ ಎಂಟ್ರಿಕೊಟ್ಟಿದೆ.
ಸೆಮಿಫೈನಲ್ ಪಂದ್ಯದಲ್ಲಿ 339 ರನ್ ಸವಾಲಿನ ಚೇಸಿಂಗ್ ಮಾಡಿದ ಭಾರತ ತಂಡ 5 ವಿಕೆಟ್‌ಗಳಿಂದ 7 ಬಾರಿಯ ಚಾಂಪಿಯನ್ ಹಹಾಗೂ ಹಾಲಿ ಚಾಂಪಿಯನ್ ಕೂಡ ಆಗಿದ್ದ ಆಸೀಸ್ ತಂಡವನ್ನು ಮಣಿಸಿ ಫೈನಲ್‌ಗೇರಿದೆ.
ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 339 ರನ್‌ಗಳನ್ನು ಚೇಸ್ ಮಾಡುವ ಕಠಿಣ ಸವಾಲು ಪಡೆದಿದ್ದ ಭಾರತ ತಂಡಕ್ಕೆ ಆರಂಭ ಉತ್ತಮವಾಗಿರಲಿಲ್ಲ. ಆದರೆ, ಜೆಮಿಮಾ ಆಡಿದ ಇನ್ನಿಂಗ್ಸ್ ಭಾರತಕ್ಕೆ ಅತ್ಯಂತ ಸ್ಮರಣೀಯ ಎನಿಸುವಂಥ ಗೆಲುವು ತಂದುಕೊಟ್ಟಿತು. ಶೆಫಾಲಿ ವರ್ಮ ಕೇವಲ 10 ರನ್ ಬಾರಿಸಿ ಔಟಾದರೆ, ಅನುಭವಿ ಆಟಗಾರ್ತಿ ಸ್ಮೃತಿ ಮಂದನಾ 24 ರನ್ ಬಾರಿಸಿ ಔಟಾದರು.
ಹರ್ಮಾನ್‌ಪ್ರೀತ್ ಕೌರ್ 88 ಎಸೆತಗಳ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ, 2 ಸಿಕ್ಸರ್‌ನೊಂದಿಗೆ 89 ರನ್ ಬಾರಿಸಿದರು. ಇದರಿಂದಾಗಿ ಜೆಮಿಮಾ ಜೊತೆ ಮೂರನೇ ವಿಕೆಟ್‌ಗೆ 156 ಎಸೆತಗಳಲ್ಲಿ 167 ರನ್‌ಗಳ ಭರ್ಜರಿ ಜೊತೆಯಾಟವಾಡಿತು. ದೀಪ್ತಿ ಶರ್ಮ (24) ಜೆಮಿಮಾ ಜೊತೆ ನಾಲ್ಕನೇ ವಿಕೆಟ್‌ಗೆ 38 ರನ್ ಜೊತೆಯಾಟವಾಡಿದರು.

