ಕೊಡಗಿನ ಮೂಲಕ ಹಾದುಹೋಗುವ ಹೆದ್ದಾರಿಗಳ ಅಭಿವೃದ್ದಿ

ದಿಗಂತ ವರದಿ ಮಡಿಕೇರಿ:

ಕೊಡಗು -ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಗುರುವಾರ ರಾಷ್ಡ್ರೀಯ ಹೆದ್ದಾರಿ ಪ್ರಾಧಿಕಾರ (ಎನ್’ಹೆಚ್’ಐಎ)ದ ಅಧ್ಯಕ್ಷೆ‌ ಅಲ್ಕಾ ಉಪಾಧ್ಯಾಯ ಅವರನ್ನು ಭೇಟಿ ಮಾಡಿ ಕೊಡಗಿನ ಮೂಲಕ ಹಾದು ಹೋಗುವ ವಿವಿಧ ಹೆದ್ದಾರಿಗಳ ಕಾಮಗಾರಿಗಳನ್ನು ವಿಳಂಬ ರಹಿತವಾಗಿ ಕೈಗೊಳ್ಳುವಂತೆ ಮನವಿ ಮಾಡಿದರು.
ಕೇರಳ-ಕೊಡಗು ಸಂಪರ್ಕ ರಸ್ತೆಯಾದ ಹೊಸದುರ್ಗ-ಪಾಣತ್ತೂರು – ಭಾಗಮಂಡಲ – ಮಡಿಕೇರಿ ಹಾಗೂ ಚೇರ್ಕಳ- ಕಲ್ಲಡ್ಕ ರಸ್ತೆ ಮತ್ತು ಚನ್ನರಾಯಪಟ್ಟಣ-ಸೋಮವಾರಪೇಟೆ-ಮಡಿಕೇರಿ- ಮಾಕುಟ್ಟ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ಸಂಬಂಧ ಚರ್ಚೆ ನಡೆಸಿದರು.
ಇದೇ ಸಂದರ್ಭ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಾಗೂ ಮೈಸೂರು-ನಂಜನಗೂಡು ಆರು ಪಥದ ಹೆದ್ದಾರಿ ನಿರ್ಮಾಣದ‌ ಬಗ್ಗೆಯೂ ಗಮನಸೆಳೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!