ರಾಜಸ್ಥಾನದಲ್ಲೂ ಕೇಳಿ ಬಂದಿದೆ ಹಿಜಾಬ್‌ ಕೂಗು: ಬುರ್ಖಾ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ತಡೆದ ಕಾಲೇಜು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರ್ನಾಟಕದಲ್ಲಿ ಪ್ರಾರಂಭವಾದ ಹಿಜಾಬ್‌ ವಿವಾದ ಈಗ ರಾಜಸ್ಥಾನಕ್ಕೂ ತಲುಪಿದೆ.
ರಾಜಸ್ಥಾನದ ಜೈಪುರದ ಚಕ್ಸು ಎಂಬಲ್ಲಿನ ಖಾಸಗಿ ಕಾಲೇಜೊಂದು ಶುಕ್ರವಾರ ಬುರ್ಖಾ ಧರಿಸಿ ಬಂದಿದ್ದ ಕೆಲವು ವಿದ್ಯಾರ್ಥಿನಿಯರನ್ನು ಕಾಲೇಜು ಪ್ರವೇಶ ಪಡೆಯಲು ನಿರಾಕರಿಸಿರುವ ಘಟನೆ ನಡೆದಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ವಿರುದ್ದ ಆಕ್ರೋಶ್‌ ವ್ಯಕ್ತಪಡಿಸಿದ ವಿದ್ಯಾರ್ಥಿನಿಯರು, ಸ್ಥಳಕ್ಕೆ ತಮ್ಮ ಕುಟುಂಬಸ್ಥರನ್ನು ಕರೆದಂದು ನ್ಯಾಯಯುತ ಹಕ್ಕು ನೀಡಬೇಕೆಂದು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆಯ ಘೋಷಣೆ ಕೂಗಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಚಕ್ಸು ಪೊಲೀಸ್‌ ಠಾಣಾ ಅಧಿಕಾರಿ ಜಿತೇಂದ್ರ ಕುಮಾರ್‌ ವರ್ಮಾ ಜನರನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಟ್ವೀಟ್‌ ಮಾಡಿದ ಕಾಂಗ್ರೆಸ್‌ ಶಾಸಕ ವಾಜಿಬ್‌ ಅಲಿ, ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆಗೆ ಹಿಜಾಬ್‌ ಧರಿಸಲು ಅವಕಾಶವಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಗಮನ ಹರಿಸಿ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!