ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೇಮಿಗಳ ದಿನವೇ ಬಾಲಿವುಡ್ ನಟಿ ರಾಖಿ ಸಾವಂತ್ ದಾಂಪತ್ಯ ಅಂತ್ಯ ಕಂಡಿದೆ.
ಪತಿ ರಿತೇಶ್ ಅವರಿಂದ ಬೇರ್ಪಟ್ಟಿರುವುದಾಗಿ ರಾಖಿ ಸಾವಂತ್ ಹೇಳಿಕೊಂಡಿದ್ದಾರೆ. ಇವರಿಬ್ಬರ ವಿವಾಹದ ವಿಷಯ ಹೆಚ್ಚು ಸಮಯ ನಿಗೂಢವಾಗಿಯೇ ಇತ್ತು. ರಾಖಿ ಸಾವಂತ್ ಬಿಗ್ಬಾಸ್ಗೆ ಎಂಟ್ರಿ ಕೊಟ್ಟ ನಂತರ ಈ ವಿಷಯ ಬಹಿರಂಗವಾಗಿತ್ತು.
ಬಿಗ್ಬಾಸ್ನಲ್ಲಿ ರಾಖಿ ಹಾಗೂ ಅವರ ಪತಿ ರಿತೇಶ್ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಇವರ ಮದುವೆ ವಿಷಯ ಹೊರಬಂದಿತ್ತು. ಈ ನಿರ್ಧಾರ ನಮಗೆ ಅನಿವಾರ್ಯ ಹಾಗೂ ಕಠಿಣವಾಗಿತ್ತು. ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನ ಮಾಡಿದೆವು. ಆದರೆ ಅದು ಕೂಡ ವರ್ಕೌಟ್ ಆಗಿಲ್ಲ. ನನ್ನ ಆರೋಗ್ಯ ಹಾಗೂ ವೃತ್ತಿ ಬಗ್ಗೆ ಹೆಚ್ಚು ಗಮನ ಕೊಡುವ ಸಮಯ ಇದೀಗ ಬಂದಿದೆ. ರಿತೇಶ್ ಜೀವನವೂ ಚೆನ್ನಾಗಿರಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.