ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೋ ಕಬಡ್ಡಿ ಸೀಸನ್ 8ರಲ್ಲಿ ಬೆಂಗಳೂರು ಬುಲ್ಸ್ ತಂಡ ಸೆಮಿಫಿನಾಲೆಯಲ್ಲಿ ಮುಗ್ಗರಿಸಿದೆ.
ನಿನ್ನೆ ನಡೆದ ಸೆನಿಫೈನಲ್ಸ್ ಪಂದ್ಯದ ಆರಂಭದಿಂದಲೂ ದಬಾಂಗ್ ಡೆಲ್ಲಿ ಗೆ ತೀವ್ರ ಪೈಪೋಟಿ ನೀಡಿದ ಬೆಂಗಳೂರು ಬುಲ್ಸ್ ಫೈನಲ್ ತಲುಪುವಲ್ಲಿ ಎಡವಿದೆ.
ಬೆಂಗಳೂರು ಬುಲ್ಸ್ 35-40 ಅಂತರದಲ್ಲಿ ದಬಾಂಗ್ ಡೆಲ್ಲಿ ಎದುರು ಸೋಲೊಪ್ಪಿಕೊಂಡಿದೆ. ಆರಂಭದಲ್ಲಿ ಬೆಂಗಳೂರು ಬುಲ್ಸ್ ತಂಡ 17 ಅಂಕಗಳು ಮತ್ತು ದಬಾಂಗ್ ಡೆಲ್ಲಿ 16 ಅಂಕಗಳನ್ನು ಹೊಂದಿದ್ದವು. ಬ್ರೇಕ್ ಬಳಿಕ ತನ್ನ ಆರ್ಭಟ ಹೆಚ್ಚಿಸಿಕೊಂಡ ಡೆಲ್ಲಿ ಕೇವಲ 10 ನಿಮಿಷದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಆಲ್ ಔಟ್ ಮಾಡುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಫಿನಾಲೆಗೆ ತಲುಪುವ ಬೆಂಗಳೂರು ಬುಲ್ಸ್ ತಂಡದ ಕನಸು ಭಗ್ನಗೊಂಡಿದೆ.
ನಾಳೆ ದಬಾಂಗ್ ಡೆಲ್ಲಿ ಹಾಗೂ ಪಾಟ್ನಾ ಪೈರೇಟ್ಸ್ ನಡುವೆ ಫಿನಾಲೆಯ ಹಗ್ಗಜಗ್ಗಾಟ ನಡೆಯಲಿದೆ.