ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ನಂ.3 ಟೆನಿಸ್ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ಅಂಪೈರ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಜ್ವೆರೆವ್ ಹಾಗೂ ಬ್ರೆಜಿಲ್‌ನ ಮಾರ್ಸೆಲೋ ಮೆಲೊ ಜೋಡಿ ಬ್ರಿಟನ್ ಲಾಯ್ಡ್ ಗ್ಲಾಸ್‌ಪೂಲ್ ಫಿನ್ ಲ್ಯಾಂಡ್‌ನ ಹ್ಯಾರಿ ಜೋಡಿ ವಿರುದ್ಧ ಸೋಲು ಅನುಭವಿಸಿದ್ದಾರೆ.
ಸೋಲಿನಿಂದ ತಾಳ್ಮೆ ಕಳೆದುಕೊಂಡಿದ್ದ ಜ್ವೆರೆವ್ ಅಂಪೈರ್ ಬಳಿ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಅವರು ಕೂತಿದ್ದ ಕುರ್ಚಿಗೆ ಬ್ಯಾಟ್ ಬೀಸಿದ್ದಾರೆ. ಈ ವರ್ತನೆಗೆ ಎಲ್ಲೆಡೆ ಭಾರೀ ವಿರೋಧ ವ್ಯಕ್ತವಾಗಿದ್ದು, ತಕ್ಷಣವೇ ಅವರನ್ನು ಸಿಂಗಲ್ಸ್ ಟೂರ್ನಿಯಿಂದ ಹೊರಹಾಕಲಾಗಿದೆ. ಇದರ ಜೊತೆ ಭಾರೀ ದಂಡ ಬೀಳುವ ಸಾಧ್ಯತೆಯೂ ಇದೆ.