ಉಕ್ರೇನ್​ – ರಷ್ಯಾ ಸಂಘರ್ಷ: ಸಾವಿರಕ್ಕೂ ಅಧಿಕ ಸೈನಿಕರ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ-ಉಕ್ರೇನ್​ ನಡುವಿನ ಭೀಕರ ಕದನದಿಂದ ಎರಡು ದೇಶದಲ್ಲಿ ಅಪಾರ ಪ್ರಮಾಣದ ಸಾವು – ನೋವು ಉಂಟಾಗಿದ್ದು, ರಷ್ಯಾದ ಸಾವಿರಕ್ಕೂ ಅಧಿಕ ಸೈನಿಕರು ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆಂದು ಉಕ್ರೇನ್​ ರಕ್ಷಣಾ ಸಚಿವಾಲಯ ತಿಳಿಸಿದೆ.
ರಷ್ಯಾ ಅಧ್ಯಕ್ಷ ಪುಟಿನ್​ ಉಕ್ರೇನ್​ ವಿರುದ್ಧ ನಿನ್ನೆ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದ್ದು, ಇದರಿಂದ ಉಭಯ ದೇಶಗಳ ನಡುವೆ ದಾಳಿ,ಪ್ರತಿದಾಳಿ ನಡೆಯಿತು. ಉಕ್ರೇನ್​​ನ ಬಹುತೇಕ ಎಲ್ಲ ನಗರಗಳ ಮೇಲೆ ರಷ್ಯಾ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಉಕ್ರೇನ್​ ಕೂಡ ದಾಳಿ ನಡೆಸಿದೆ. ಅನೇಕ ಯೋಧರು ಹತ್ಯೆ ಮಾಡಿರುವುದಾಗಿ ಮಾಹಿತಿ ಹಂಚಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!