ಹೊಸದಿಗಂತ ವರದಿ, ಮಡಿಕೇರಿ:
ಹುಲಿ ದಾಳಿಗೆ ಜಾನುವಾರು ಬಲಿಯಾಗಿರುವ ಘಟನೆ ಬಾಡಗಕೇರಿ ಗ್ರಾಮದಲ್ಲಿ ನಡೆದಿದೆ.
ಅಮ್ಮತ್ತೀರ ಚಂದ್ರಶೇಖರ್ ಅವರಿಗೆ ಸೇರಿದ ಎಮ್ಮೆ ಸನಿಹದ ತೋಟದಲ್ಲಿ ವ್ಯಾಘ್ರನ ದಾಳಿಗೆ ಬಲಿಯಾಗಿದೆ.
ಈ ಬಗ್ಗೆ ಶ್ರೀಮಂಗಲ ಅರಣ್ಯ ಇಲಾಖಾ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು.
ಸ್ಥಳಕ್ಕೆ ಗ್ರಾ.ಪಂ ಉಪಾಧ್ಯಕ್ಷ ಅಮ್ಮತ್ತೀರ ರಾಜೇಶ್, ಸದಸ್ಯೆ ಮಲ್ಲೇಂಗಡ ರೀನಾ ಭೇಟಿ ನೀಡಿ ಹುಲಿ ಸೆರೆಗೆ ಒತ್ತಾಯಿಸಿದರು.