ಪ್ರಧಾನಿ ಮೋದಿಗೆ ಕರೆ ಮಾಡಿದ ಉಕ್ರೇನ್ ಅಧ್ಯಕ್ಷ: ವಿಶ್ವಸಂಸ್ಥೆಯಲ್ಲಿ ಬೆಂಬಲ ನೀಡುವಂತೆ ಮನವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ಜೊತೆಗಿನ ಯುದ್ಧದ ನಡುವೆ ಪ್ರಧಾನಿ ಮೋದಿ ಜೊತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಉಕ್ರೇನ್​ ಅಧ್ಯಕ್ಷ ಝೆಲೆನ್‌ಸ್ಕಿ ವಿಶ್ವಸಂಸ್ಥೆಯಲ್ಲಿ ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತಂತೆ ಉಕ್ರೇನ್ ಅಧ್ಯಕ್ಷ ಟ್ವಿಟ್ ಮಾಡಿದ್ದು, ರಷ್ಯಾದ ಆಕ್ರಮಣಗಳ ಮಾಹಿತಿಯನ್ನು ಪ್ರಧಾನಿ ಮೋದಿಗೆ ವಿವರಿಸಿದ ಝೆಲೆನ್‌ಸ್ಕಿ, ಯುಎನ್ ಎಸ್ ಸಿಯಲ್ಲಿ ನಮಗೆ ರಾಜಕೀಯ ಬೆಂಬಲ ನೀಡುವಂತೆ ಭಾರತವನ್ನು ಕೋರಲಾಗಿದೆ. ಆಕ್ರಮಣಕಾರನನ್ನು ಒಟ್ಟಾಗಿ ನಿಲ್ಲಿಸೋದಕ್ಕೆ ಮನವಿ ಮಾಡಲಾಗಿದೆ ಎಂದಿದ್ದಾರೆ.. ಈ ನಡುವೆ ರಷ್ಯಾದ 1 ಲಕ್ಷ ಸೈನಿಕರು ಉಕ್ರೇನ್​​ನ ವಿವಿಧ ನಗರಗಳಿಗೆ ನುಗ್ಗಿದ್ದಾರೆ ಎಂದು ಅಧ್ಯಕ್ಷ ಜೆಲೆನ್ಸ್ಕಿ ಹೇಳಿದ್ದಾರೆ. ನಡೆಯುತ್ತಿರುವ ಸಂಘರ್ಷದಿಂದಾಗಿ ಜೀವ ಮತ್ತು ಆಸ್ತಿ ನಷ್ಟದ ಬಗ್ಗೆ ಪ್ರಧಾನಿ ತೀವ್ರ ದುಃಖ ವ್ಯಕ್ತಪಡಿಸಿದರು ಎಂದು ಹೇಳಿದೆ.
ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿದ್ದು, ರಷ್ಯಾದ ಆಕ್ರಮಣಾಕಾರಿ ನೀತಿಯನ್ನು ಖಂಡಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಲಾಗಿದ್ದ ನಿರ್ಣಯದಲ್ಲಿ ಮತ ಚಲಾಯಿಸುವುದರಿಂದ ಭಾರತ ದೂರ ಉಳಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!