ಹೊಸದಿಗಂತ ವರದಿ, ಸೋಮವಾರಪೇಟೆ:
ಇಲ್ಲಿಗೆ ಸಮೀಪದ ಪ್ರವಾಸಿತಾಣ, ಮಲ್ಲಳ್ಳಿ ಜಲಪಾತದ ಬಳಿ ಅಪರಿಚಿತ ಪುರುಷನ ಶವವೊಂದು ಪತ್ತೆಯಾಗಿದೆ.
ಗ್ರಾಮಸ್ಥರೊಬ್ಬರು ಮಂಗಳವಾರ ಜಲಪಾತದ ಸಮೀಪ ತೆರಳುತ್ತಿದ್ದ ಸಂದರ್ಭ ಪೊದೆಯೊಳಗೆ ಅಪರಿಚಿತ ವ್ಯಕ್ತಿಯ ಕೊಳೆತ ಶವ ಕಂಡು ಬಂದಿದೆ.
ಒಂದು ವಾರದ ಹಿಂದೆಯೇ ಘಟನೆ ನಡೆದಿರಬಹುದಾಗಿದ್ದು, ದೇಹವನ್ನು ಸುಟ್ಟು ಹಾಕಲು ಪ್ರಯತ್ನಿಸಿರುವುದು ಗೋಚರಿಸಿದೆ.
ಇದರಿಂದಾಗಿ ಕೊಲೆ ಶಂಕೆ ವ್ಯಕ್ತವಾಗಿದ್ದು, ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಕೈಗೊಂಡಿದ್ದಾರೆ.