ಹೊಸದಿಗಂತ ವರದಿ, ಚಿತ್ರದುರ್ಗ :
ಕಾಂಗ್ರೆಸ್ ನಾಯಕರ ಪಾದಯಾತ್ರೆಯಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ. ಮುಂದಿನ ಚುನವಣೆಯಲ್ಲಿ ಗೆದ್ದರೆ ಯಾರು ಕ್ಯಾಪ್ಟನ್ ಆಗಬೇಕೆಂದು ಯೋಚನೆ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಗೆಲ್ಲುವುದೂ ಇಲ್ಲ, ಕ್ಯಾಪನ್ ಆಗುವುದೂ ಇಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದರು.
ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಕುರಿತು ಸದನದಲ್ಲಿ ಚರ್ಚೆ ಮಾಡಲು ಕೈ ನಾಯಕರು ಅವಕಾಶ ನೀಡಲಿಲ್ಲ. ಇಷ್ಟು ವರ್ಷ ಅಧಿಕಾರದಲ್ಲಿದ್ದಾಗ ಏಕೆ ಮೇಕೆದಾಟು ಯೋಜನೆ ಮಾಡಲಿಲ್ಲ. ಪಾದಯಾತ್ರೆ ಮಾಡುವ ಸ್ಥಿತಿ ಯಾಕೆ ಬಂದಿದೆ ಎಂದು ಯೋಚನೆ ಮಾಡಬೇಕು ಎಂದರು.
ಮೊದಲ ಪಾದಯಾತ್ರೆ ಪೇಲ್ ಆಗಿದೆ. ೨ನೇ ಪಾದಯಾತ್ರೆ ಹೊರಟಿದ್ದಾರೆ. ಈಗ ನಾನು ಮುಂದೆ, ನೀನು ಮುಂದೆ ಎಂದು ಪೈಪೋಟಿ ಮಾಡಿಕೊಂಡು ಹೊರಟಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿಗೆ ಕಳೆದ ಬಾರಿ ೧೦೪ ಸ್ಥಾನ ಬಂದಿತ್ತು. ಈ ಬಾರಿ ಸ್ಪಷ್ಟ ಬಹುಮತ ಬರುತ್ತದೆ. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಕ್ರೇನ್‌ನಲ್ಲಿ ಸಿಲುಕಿದ ವಿಧ್ಯಾರ್ಥಿಗಳ ಕರೆತರಲು ಮುಖ್ಯಮಂತ್ರಿ ಕೇಂದ್ರದ ನಾಯಕರ ಜೊತೆಗೆ ಸಂಪರ್ಕದಲ್ಲಿದ್ದಾರೆ. ನಾನು ಕೂಡಾ ಈ ಭಾಗದ ವಿಧ್ಯಾರ್ಥಿಗಳನ್ನು ವಾಪಸ್ ಕರೆತರಲು ಯತ್ನಿಸುತ್ತಿದ್ದೇನೆ. ಮಕ್ಕಳ ಕುರಿತು ಪೋಷಕರಲ್ಲಿ ಆತಂಕವಿದೆ. ಈಗಾಗಲೇ ೨-೩ ವಿಮಾನಗಳು ಬಂದಿದ್ದು, ಎಲ್ಲರನ್ನೂ ಶೀಘ್ರದಲ್ಲೇ ಕರೆತರುವ ಯತ್ನ ನಡೆಯುತ್ತಿದೆ ಎಂದರು.