ಉಕ್ರೇನ್‌ ಸೇನೆ ನೆರವಿಗೆ ಧಾವಿಸಿದ ಜರ್ಮನಿ: 2,700 ವಿಮಾನ ನಿರೋಧಕ ಕ್ಷಿಪಣಿ ರವಾನೆಗೆ ಸಿದ್ಧತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದ ಸೇನಾದಾಳಿಗೆ ಉಕ್ರೇನ್‌ ಭಾಗಶಃ ನಲುಗಿ ಹೋಗಿದೆ. ಆದರೂ ಉಕ್ರೇನ್‌ ಸೈನಿಕರು ಛಲದಿಂದ ಹೋರಾಡುತ್ತಿದ್ದಾರೆ. ಇನ್ನೊಂದೆಡೆ ಉಕ್ರೇನ್‌ ಏಕಾಂಗಿ ಹೋರಾಟಕ್ಕೆ ಕೆಲ ಮಿತ್ರರಾಷ್ಟ್ರಗಳು ಕೈಜೋಡಿಸಿವೆ. ಜರ್ಮನಿಯು ಉಕ್ರೇನ್‌ಗೆ 2,700 ವಿಮಾನ ನಿರೋಧಕ ಕ್ಷಿಪಣಿಗಳನ್ನು ರವಾನಿಸಲು ಸಿದ್ಧತೆ ನಡೆಸಿದ್ದು, ಈ ಮೂಲಕ ಉಕ್ರೇನ್‌ ಸೈನ್ಯಕ್ಕೆ ಬಲ ತುಂಬಲಿದೆ ಎಂದು ಜರ್ಮನಿ ಸರ್ಕಾರದ ಮೂಲಗಳು ತಿಳಿಸಿವೆ. ಜರ್ಮನಿಯು ಸ್ಟ್ರೆಲ್ಲಾ ಮಾದರಿಯ ವಿಮಾನ ನಿರೋಧಕ ಕ್ಷಿಪಣಿಗಳನ್ನು ಉಕ್ರೇನ್‌ನ ಸಂಘರ್ಷಪೀಡಿತ ಪ್ರದೇಶಗಳಿಗೆ ಕಳುಹಿಸಲಿದೆ. ಇವುಗಳನ್ನು ಈ ಹಿಂದೆ ಸೋವಿಯತ್‌ ಕಮ್ಯುನಿಷ್ಟ್‌ ಸೈನ್ಯವು ಪೂರ್ವ ಜರ್ಮನಿಯಲ್ಲಿ ಬಳಸುತ್ತಿತ್ತು ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!