ನಮ್ಮ ಅಡುಗೆ ಮನೆಯಲ್ಲಿ ಅತಿ ಸಾಮಾನ್ಯವಾಗಿ ಕಾಣಸಿಗುವ ಪದಾರ್ಥವೆಂದರೆ ಈರುಳ್ಳಿ. ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಇದು ಆರೋಗ್ಯಕ್ಕೂ ಒಳ್ಳೆಯದು ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಆದರೆ, ಅದೇ ಈರುಳ್ಳಿ ಸರಿಯಾದ ರೀತಿಯಲ್ಲಿ ಸಂಗ್ರಹಿಸದಿದ್ದರೆ ಅದು ಔಷಧವಾಗಿರದೆ ವಿಷದಂತಾಗಬಹುದು ಎಂಬುದನ್ನು ಬಹುತೇಕ ಜನರು ತಿಳಿದಿರುವುದಿಲ್ಲ. ಅನೇಕ ಮನೆಗಳಲ್ಲಿ ಈರುಳ್ಳಿಯನ್ನು ಒಂದೇ ಬಾರಿಗೆ ಹೆಚ್ಚು ಪ್ರಮಾಣದಲ್ಲಿ ಖರೀದಿಸಿ, ದೀರ್ಘ ಕಾಲ ಸಂಗ್ರಹಿಸುವ ಅಭ್ಯಾಸವಿದೆ. ಆದರೆ ಈ ಸಂಗ್ರಹಣಾ ವಿಧಾನ ಮತ್ತು ಅದರ ಪರಿಣಾಮಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು.
- ಕಪ್ಪು ಕಲೆಗಳ ಈರುಳ್ಳಿ ತಿನ್ನಬೇಡಿ: ಈರುಳ್ಳಿಯ ಮೇಲಿನ ಕಪ್ಪು ಚುಕ್ಕೆಗಳು ಕೇವಲ ಧೂಳು ಅಥವಾ ಹಳತಾದ ಗುರುತುಗಳಲ್ಲ. ಅವು ವಾಸ್ತವವಾಗಿ “ಆಸ್ಪರ್ಜಿಲಸ್ ನೈಗರ್” (Aspergillus Niger) ಎಂಬ ಶಿಲೀಂಧ್ರದ ಬೆಳವಣಿಗೆ. ಈ ಶಿಲೀಂಧ್ರವು ಮಣ್ಣಿನ ಮೂಲಕ ಈರುಳ್ಳಿಯೊಳಗೆ ಪ್ರವೇಶಿಸಿ, ದೇಹಕ್ಕೆ ಹಾನಿಕಾರಕವಾದ ಅಲರ್ಜಿಗಳು ಹಾಗೂ ಸೋಂಕು ಉಂಟುಮಾಡಬಹುದು.
- ಶಿಲೀಂಧ್ರದ ಪರಿಣಾಮ ಗಂಭೀರ: ಈ ಕಪ್ಪು ಶಿಲೀಂಧ್ರವು ಶ್ವಾಸಕೋಶದ ಮೂಲಕ ದೇಹದೊಳಗೆ ಪ್ರವೇಶಿಸಿದರೆ ಆಸ್ತಮಾ ಅಥವಾ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಅಪಾಯಕಾರಿಯಾಗುತ್ತದೆ. ಕ್ಷಯ ಅಥವಾ ಎಚ್ಐವಿ ರೋಗಿಗಳು, ಮಧುಮೇಹಿಗಳು ಈ ರೀತಿಯ ಈರುಳ್ಳಿ ಸೇವನೆ ಸಂಪೂರ್ಣ ತಪ್ಪಿಸಬೇಕು.
- ಒಳ ಪದರದ ಬಣ್ಣ ಬದಲಾವಣೆ – ಅಪಾಯದ ಸೂಚನೆ: ಈರುಳ್ಳಿಯ ಒಳ ಪದರದಲ್ಲಿಯೂ ಕಪ್ಪು ಕಲೆಗಳು ಅಥವಾ ಮೃದುತನ ಕಂಡುಬಂದರೆ, ಅದನ್ನು ತಕ್ಷಣ ತ್ಯಜಿಸಬೇಕು. ಬದಲಾಗಿರುವ ವಾಸನೆ ಅಥವಾ ಹಾಳಾದ ತಳಿರು ಈರುಳ್ಳಿಯು ಆಹಾರ ವಿಷದ ಪರಿಣಾಮ ಉಂಟುಮಾಡಬಹುದು.
- ಸಂಗ್ರಹಣೆ ವೇಳೆ ಮಾಡುವ ಸಾಮಾನ್ಯ ತಪ್ಪುಗಳು: ಬಹಳ ಮಂದಿ ಈರುಳ್ಳಿಯನ್ನು ಫ್ರಿಜ್‌ನಲ್ಲಿ ಇಡುವರು ಅಥವಾ ಆಲೂಗಡ್ಡೆಯೊಂದಿಗೆ ಸೇರಿಸಿ ಇಡುವರು. ಇದು ತಪ್ಪು. ಏಕೆಂದರೆ ಈರುಳ್ಳಿ ತೇವಾಂಶವನ್ನು ಹೀರಿಕೊಳ್ಳುತ್ತಾ ಬೇಗನೆ ಹಾಳಾಗುತ್ತದೆ. ಅದನ್ನು ತಂಪಾದ, ಒಣ ಹಾಗೂ ಗಾಳಿಯಾಡುವ ಸ್ಥಳದಲ್ಲಿ ಇಡುವುದು ಉತ್ತಮ.
- ಸುರಕ್ಷಿತ ಬಳಕೆಗಾಗಿ ಸರಳ ಸಲಹೆಗಳು: ಈರುಳ್ಳಿಯ ಸಿಪ್ಪೆಯ ಮೇಲಿನ ಕಲೆಗಳು ಮಾತ್ರ ಇದ್ದರೆ ಅದನ್ನು ಚೆನ್ನಾಗಿ ತೊಳೆದು ಬಳಸಿ. ಆದರೆ ಒಳಗಡೆ ಬಣ್ಣ ಬದಲಾಗಿದ್ದರೆ, ಅದನ್ನು ಬಿಸಾಡುವುದು ಸುರಕ್ಷಿತ. ಕತ್ತರಿಸಿದ ಈರುಳ್ಳಿಯನ್ನು ತೆರೆದ ಸ್ಥಿತಿಯಲ್ಲಿ ಫ್ರಿಜ್‌ನಲ್ಲಿ ಇಡುವ ತಪ್ಪು ಮಾಡಬೇಡಿ.

