ಹೊಸದಿಗಂತ ಡಿಜಿಟಲ್ ಡೆಸ್ಕ್
ಇಸ್ರೇಲ್ ಜೆರುಸಲೇಂನಲ್ಲಿ 4 ವರ್ಷದ ಮಗುವಿನಲ್ಲಿ ಪೋಲಿಯೊ ಸೋಂಕು ಪತ್ತೆಯಾಗಿದೆ ಎಂದು ಇಸ್ರೇಲಿ ಆರೋಗ್ಯ ಸಚಿವಾಲಯ ಹೇಳಿದೆ.
1989 ರಿಂದೀಚೆಗೆ ಇಸ್ರೇಲ್‌ನಲ್ಲಿ ಪತ್ತೆಯಾದ ಮೊದಲ ಪೋಲಿಯೊ ಪ್ರಕರಣ ಇದಾಗಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.
ಇಸ್ರೇಲ್‌ನಲ್ಲಿ ಮಕ್ಕಳಿಗೆ ಕಟ್ಟುನಿಟ್ಟಿನ ಪೋಲಿಯೋ ವ್ಯಾಕ್ಸಿನೇಶನ್ ಜಾರಿಯಲಿದೆ. ಆದರೆ ಈ ಮಗು ಲಸಿಕೆಯನ್ನು ಹಾಕಿಸಿಕೊಂಡಿರಲಿಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ. ಮಗುವಿಗೆ ಕಾಣಿಸಿಕೊಂಡಿರುವುದು ಪೋಲಿಯೊ ವೈರಸ್‌ನ ಹೊಸ ತಳಿಯಾಗಿದ್ದು, ಲಸಿಕೆ ಹಾಕಿಸಿಕೊಳ್ಳದವರಲ್ಲಿಇದು ಕಾಣಸಿಕೊಳ್ಳುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಗುವಿಗೆ ಸೋಂಕು ಕಾಣಸಿಕೊಂಡ ಬೆನ್ನಲ್ಲೇ ಸರ್ಕಾರ ಎಚ್ಚತ್ತುಕೊಂಡಿದ್ದು, ಕಟ್ಟುನಿಟ್ಟಾಗಿ ಪೊಲೀಯೋ ಲಸಿಕೆಯನ್ನು ಹಾಕಿಸುವಂತೆ ಮಕ್ಕಳ ಪೋಷಕರಿಗೆ ಸೂಚಿಸಿದೆ ಮತ್ತು ಲಸಿಕೆ ಹಾಕಿಸಿಕೊಳ್ಳದ ಮಕ್ಕಳಿಗೆ ತಕ್ಷಣವೇ ಲಸಿಕೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ