ಹೊಸದಿಗಂತ ಡಿಜಿಟಲ್ ಡೆಸ್ಕ್
ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ 13ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾದ ಪಡೆಗಳು ತೀವ್ರವಾದ ದಾಳಿಗೆ ಉಕ್ರೇನ್ ಸೇನೆ ದಿಟ್ಟವಾದ ಪ್ರತಿರೋಧ ಒಡ್ಡುತ್ತಿದೆ.
ಈ ನಡುವೆ ಉಕ್ರೇನ್ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ ಸಮೀಪ ನಡೆದ ಹೋರಾಟದಲ್ಲಿ ರಷ್ಯಾದ ಜನರಲ್ ಓಬ್ಬರನ್ನು ಕೊಂಡಿರುವುದಾಗಿ ಉಕ್ರೇನ್ ಗುಪ್ತಚರ ಸಂಸ್ಥೆ ತಿಳಿಸಿದೆ. ರಷ್ಯಾದ ಮೇಜರ್ ಜನರಲ್, ಸಿಬ್ಬಂದಿ ಮುಖ್ಯಸ್ಥ ಹಾಗೂ ಸೆಂಟ್ರಲ್ ಮಿಲಿಟರಿ ಡಿಸ್ಟ್ರಿಕ್ಟ್ನ 41 ನೇ ಸೈನ್ಯದ ಮೊದಲ ಉಪ ಕಮಾಂಡರ್ ವಿಟಾಲಿ ಗೆರಾಸಿಮೊವ್(45) ಸಾವನ್ನಪ್ಪಿದವರು.
ಗೆರಾಸಿಮೊವ್ ಈ ಹಿಂದೆ ಸಿರಿಯಾ ಮತ್ತು ಚೆಚೆನ್ಯಾದಲ್ಲಿ ನಡೆದ ಯುದ್ಧದಲ್ಲಿ ಸಹ ಭಾಗಿಯಾಗಿದ್ದರು. ಈ ಮೊದಲು ಉಕ್ರೇನ್ ಪಡೆಗಳು ರಷ್ಯಾದ 7ನೇ ಏರ್ ಫೋರ್ಸ್ ವಿಭಾಗದ ಕಮಾಂಡಿಂಗ್ ಮೇಜರ್ ಜನರಲ್ ಆಂಡ್ರೇ ಸುಖೋವೆಟ್ಸ್ಕಿ ಅವರ ಹತ್ಯೆ ಮಾಡಿತ್ತು. ಇತ್ತೀಚಿನ ದಿನಗಳಲ್ಲಿ ನಡೆದ ಎರಡನೇ ಹೈ- ಪ್ರೊಫೈಲ್ ಹತ್ಯೆ ಇದಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ