ಜರ್ಮನ್​ ಓಪನ್​ ಸೂಪರ್ ಬ್ಯಾಡ್ಮಿಂಟನ್​ ಟೂರ್ನಮೆಂಟ್: 2ನೇ ಸುತ್ತು ಪ್ರವೇಶಿಸಿದ ಪಿ.ವಿ.ಸಿಂಧು, ಶ್ರೀಕಾಂತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜರ್ಮನ್​ ಓಪನ್​ ಸೂಪರ್ 300 ಬ್ಯಾಡ್ಮಿಂಟನ್​ ಟೂರ್ನಮೆಂಟ್​ನಲ್ಲಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು ಮತ್ತು ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕ ಜಯಿಸಿರುವ ಕಿಡಂಬಿ ಶ್ರೀಕಾಂತ್ 2ನೇ ಸುತ್ತು ಪ್ರವೇಶಿಸಿದ್ದಾರೆ.
7ನೇ ಶ್ರೇಯಾಂಕದ ಸಿಂಧು ಮೊದಲ ಸುತ್ತಿನಲ್ಲಿ ಥಾಯ್ಲೆಂಡ್​ನ ಬುಸಾನನ್​ ಒಂಗ್‌ಬಮ್ರುಂಗಫನ್ ವಿರುದ್ಧ 21-8, 21-7ರ ಅಂತರದಲ್ಲಿ ಯಾವುದೇ ಪೈಪೋಟಿಯಿಲ್ಲದೆ ಜಯ ಸಾಧಿಸಿದರು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಟೂರ್ನಿಯಲ್ಲಿ 8ನೇ ಶ್ರೇಯಾಂಕ ಪಡೆದಿರುವ ಶ್ರೀಕಾಂತ್ ಫ್ರಾನ್ಸ್​ನ ಬ್ರೈಸ್​ ಲೆವೆರ್ಡ್ಜ್​ ವಿರುದ್ಧ 21-10, 13-21, 21-7ರಲ್ಲಿ ಜಯ ಸಾಧಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!