ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ನಲ್ಲಿ ಯುದ್ಧದ ಭೀಕರತೆ ಹೆಚ್ಚಾಗಿದೆ. ದೇಶಗಳ ನಡುವಣ ಯುದ್ಧಕ್ಕೆ ಏನೂ ತಪ್ಪಿಲ್ಲದ ಅಸಹಾಯಕರು ಜೀವತೆತ್ತುತ್ತಿದ್ದಾರೆ. ಮರಿಯುಪೋಲ್ನಲ್ಲಿ ಯುದ್ಧದ ಭೀಕರತೆಗೆ ಆರು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಯುದ್ಧದಲ್ಲಿ ತಾಯಿಯನ್ನೂ ಕಳೆದುಕೊಂಡ ಬಾಲಕಿ, ಕುಡಿಯಲು ನೀರು ಸಿಗದೇ ಡೀಹೈಡ್ರೇಷನ್ನಿಂದ ಮೃತಪಟ್ಟಿದ್ದಾಳೆ.
ನಾಗರಿಕರು ನಮ್ಮ ಟಾರ್ಗೆಟ್ ಅಲ್ಲ, ಅವರ ಮೇಲೆ ದಾಳಿ ಮಾಡೋದಿಲ್ಲ ಎಂದು ಹೇಳಿಕೊಂಡು ಬಂದಿರುವ ರಷ್ಯಾ, ಲಕ್ಷಾಂತರ ನಾಗರಿಕರ ಸಾವಿಗೆ ಕಾರಣವಾಗಿದೆ ಎಂದು ಉಕ್ರೇನ್ ಹೇಳಿದೆ.
ಮರಿಯುಪೋಲ್ನ ಕಟ್ಟಡವೊಂದರ ಮೇಲೆ ರಷ್ಯಾ ದಾಳಿ ಮಾಡಿತ್ತು, ಈ ದಾಳಿಯಲ್ಲಿ ಬಾಲಕಿ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ಅದಾದ ನಂತರ ಎಲ್ಲಿಗೆ ಹೋಗಲು ತಿಳಿಯದೇ ಒಂದೇ ಸ್ಥಳದಲ್ಲಿ ಇದ್ದು, ಡಿಹೈಡ್ರೇಷನ್ನಿಂದ ಬಾಲಕಿ ಮೃತಪಟ್ಟಿದ್ದಾಳೆ.