ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಕೆಲವೇ ದಿನದಲ್ಲಿ 15ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದ್ದು, ಆರ್‌ಸಿಬಿ ತಂಡ ಭರ್ಜರಿ ತಯಾರಿಯಲ್ಲಿ ಮುಳುಗಿದೆ. ಈ ಬಾರಿ ಆರ್‌ಸಿಬಿ ತಂಡದಲ್ಲಿ ಎಬಿ ಡೆವಿಲಿಯರ‍್ಸ್ ಇರುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈ ಬಾರಿ ಎಬಿಡಿ ಮತ್ತೆ ತಂಡಕ್ಕೆ ಮರಳಿದ್ದಾರೆ ಎನ್ನುವ ವಿಷಯವನ್ನು ತಂಡ ರಿವೀಲ್ ಮಾಡಿದೆ.
ಹೌದು, ಕ್ರಿಕೆಟ್‌ನಿಂದ ದೂರ ಸರಿದಿದ್ದ ಎಬಿಡಿ ಇದೀಗ ಮತ್ತೆ ಆರ್‌ಸಿಬಿ ತಂಡ ಸೇರುತ್ತಿದ್ದಾರೆ. ಆದರೆ ಆಟಗಾರನಾಗಿ ಅಲ್ಲ, ಮೆಂಟರ್ ಆಗಿ! ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದ ಎಬಿಡಿಯನ್ನು ಒಪ್ಪಿಸಿರುವ ಆರ್‌ಸಿಬಿ ತಂಡ ಮೆಂಟರ್ ಆಗುವಂತೆ ಕೇಳಿಕೊಂಡಿದೆ. ಇದಕ್ಕೆ ಎಬಿಡಿ ಕೂಡ ಒಪ್ಪಿದ್ದು, ಮಾ.12ರಂದು ಆರ್‌ಸಿಬಿ ಅಭಿಮಾನಿಗಳಿಗೆ ಸರ್‌ಪ್ರೈಸ್ ಸಿಗಲಿದೆ.
ಈ ಆಫರ್‌ನ್ನು ಎಬಿಡಿ ಒಪ್ಪೋದಕ್ಕೆ ಪ್ರಮುಖ ಕಾರಣ ಆರ್‌ಸಿಬಿ ಫ್ಯಾನ್ಸ್. ತಂಡದಲ್ಲಿದ್ದಾಗ ಫ್ಯಾನ್ಸ್ ನೀಡಿದ ಪ್ರೀತಿ, ಪ್ರತಿಕ್ರಿಯೆಯಿಂದ ಎಬಿಡಿ ಕಂಬ್ಯಾಕ್ ಮಾಡಿದ್ದಾರಂತೆ.