ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲಾರದಲ್ಲಿ ಹಳಿ ಮೇಲೆ ನಿಂತಿದ್ದ ಪ್ರಯಾಣಿಕರ ಮೇಲೆ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಹರಿದಿದ್ದು, ಯುವಕನೊಬ್ಬ ಮೃತಪಟ್ಟಿದ್ದಾನೆ. ಕೋಲಾರದ ಮಾಲೂರು ತಾಲೂಕಿನ ಟೇಕಲ್ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಎರಡೂ ಬದಿ ಪ್ಯಾಸೆಂಜರ್ ರೈಲು ನಿಂತಿದೆ, ಮಾರಿಕುಪ್ಪಂ-ಎಸ್‌ಬಿಎಸ್ ಮತ್ತು ಕುಪ್ಪಂ, ಎಸ್‌ಬಿಸಿ ರೈಲುಗಳು ಆಗಮಿಸಿತ್ತು. ವಿದ್ಯುತ್ ಕಡಿತದಿಂದಾಗಿ ರೈಲುಗಳು ಮಾರ್ಗ ಮಧ್ಯೆ ನಿಂತಿದ್ದವು. ಈ ವೇಳೆ ರೈಲಿನಿಂದ ಪ್ಯಾಸೆಂಜರ‍್ಸ್ ಹಳಿ ಮೇಲೆ ಬಂದು ನಿಂತಿದ್ದರು.
ಇದೇ ಸಮಯಕ್ಕೆ ವೇಗವಾಗಿ ಬಂದ ಬೆಂಗಳೂರು-ಚೆನ್ನೈ ಶತಾಬ್ದಿ ರೈಲು ಡಿಕ್ಕಿ ಹೊಡೆದಿದೆ. ಲೊಕೊ ಪೈಲಟ್ ಸತತವಾಗಿ ಹಾರ್ನ್ ಮಾಡಿದರೂ ಪ್ರಯಾಣಿಕರು ಹಳಿ ಬಿಟ್ಟು ಹೋಗಿರಲಿಲ್ಲ. ಇನ್ನೇನು ರೈಲು ಹತ್ತಿರ ಬರುತ್ತಿದೆ ಎಂದಾಗ ಎಸ್ಕೇಪ್ ಆಗಲು ಯತ್ನಿಸಿದ್ದಾರೆ.
ಈ ದುರಂತದಲ್ಲಿ ಮೃತಪಟ್ಟ ಷರೀಫ್ ಕಿವಿಗೆ ಇಯರ್‌ಫೋನ್ ಹಾಕಿ ನಿಂತಿದ್ದರು. ಹಾರ್ನ್ ಸದ್ದಿಗೆ ಜನ ಓಡಿದ್ದರೂ ಷರೀಫ್ ಮಾತ್ರ ಅಲ್ಲೇ ನಿಂತಿದ್ದರು ಎನ್ನಲಾಗಿದೆ. ಆದರೆ ಇದನ್ನು ಷರೀಫ್ ಸಹೋದರ ಮೊಹಮದ್ ಅಲ್ಲಗಳೆದಿದ್ದು, ನನ್ನ ತಮ್ಮನಿಗೆ ರೈಲು ಹತ್ತಿರ ಬಂದಿದ್ದ ನೋಡಿ ಗಾಬರಿಯಾಗಿ ಅಲುಗಾಡಲು ಆಗಿಲ್ಲ. ಆತ ಹೆಡ್‌ಫೋನ್ಸ್ ಧರಿಸಿರಲಿಲ್ಲ ಎಂದು ಹೇಳಿದ್ದಾರೆ.
Video of Shatabdi Express at Taykal. Public from two passenger trains seen walking on the tracks before its arrival @ExpressKolar pic.twitter.com/WxZVytSMXM
— S. Lalitha (@Lolita_TNIE) March 9, 2022