ಹೊಸ ದಿಗಂತ ವರದಿ, ಮೈಸೂರು:
ನಿಯಂತ್ರಣ ಕಳೆದುಕೊಂಡ ಬೈಕ್ ಉರುಳಿ ಬಿದ್ದ ಪರಿಣಾಮ ಚಾಲಕ ಸಾವಿಗೀಡಾದ ಘಟನೆ ಮೈಸೂರಿನ ಲಿಂಗಾoಬುದಿ ಪಾಳ್ಯದ ಜಂಕ್ಷನ್ ಬಳಿ ನಡೆದಿದೆ.
ಖಾಸಗಿ ಲೇಔಟ್ ಒಂದರ ವಾಚ್ ಮನ್ ಆಗಿದ್ದ ಜಡೆಯಪ್ಪ ಮೃತ ವ್ಯಕ್ತಿ. ಈತ ಹೆಲ್ಮೆಟ್ ಧರಿಸದೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಬಿದ್ದಿದ್ದಾರೆ.ಹೆಲ್ಮೆಟ್ ಇಲ್ಲದ ಕಾರಣ ತಲೆಗೆ ಪೆಟ್ಟುಬಿದ್ದಿದೆ. ಕೂಡಲೇ ನಗರದ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ ಜಡೆಯಪ್ಪ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಕೆ.ಆರ್.ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.