ಹೊಸ ದಿಗಂತ ವರದಿ, ಕಲಬುರಗಿ:
ತೀವ್ರ ಕೂತುಹಳ ಕೆರಳಿಸಿದ್ದ ಉತ್ತರ ಪ್ರದೇಶದ ಚುನಾವಣೆಯ ಫಲಿತಾಂಶವು ಹೊರಬಿದ್ದಿದ್ದು, 2ನೇ ಬಾರಿಗೆ ಒಬ್ಬ ಸಂತನು ಜನ ಮನಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದು, ಧಾರ್ಮಿಕ ಕ್ಷೇತ್ರವಾದ ಉತ್ತರ ಪ್ರದೇಶದಲ್ಲಿ ಇದೊಂದು ಐತಿಹಾಸಿಕ ಗೆಲುವಾಗಿದೆ ಎಂದು ಶ್ರೀ ರಾಮ ಸೇನೆಯ ರಾಜ್ಯ ಗೌರಾವಾದ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಹೈದ್ರಾಬಾದಿನ ಓವೈಸಿ ಈ ಬಾರಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಮೋದಿ ಮತ್ತು ಯೋಗಿ ಮನೆಗೆ ಹೋಗುತ್ತಾರೆ ಎಂಬ ಹೇಳಿಕೆ ಮತ್ತು ವಿರೋದ ಪಕ್ಷದವರು ಬಲವಾಗಿ ಟೀಕಿಸಿದ್ದರು. ಆದರೆ. ಈಗ ಬಂದಿರುವ ಫಲಿತಾಂಶವು ಎಲ್ಲರ ಬುಡವನ್ನು ಅಳುಗಾಡಿಸಿದೆ ಎಂದ ಅವರು, ಬೆಂಕಿ (ಮೋದಿ) ಮತ್ತು ಬಿರುಗಾಳಿಗೆ (ಯೋಗಿ) ತಡೆಯುವವರು ಯಾರು ಇಲ್ಲವಾಗಿದೆ ಎಂದು ಹೇಳಿದರು. ಉತ್ತರ ಪ್ರದೇಶದಲ್ಲಿ ಒಬ್ಬ ಸಂತನ 5 ವರ್ಷಗಳ ಕಾಲ ಆಡಳಿತ ನಡೆಸಿದ ಹಿನ್ನಲೆಯಲ್ಲಿ ಈ ಐತಿಹಾಸಿಕ ಗೆಲುವಾಗಿದ್ದು, ಈ ಗೆಲುವು ಹಿಂದೂ ರಾಷ್ಟ್ರ ನಿರ್ಮಾಣದ ಸಂಕೇತವಾಗಿದೆ ಎಂದರು.
ಪಟೇಲ್ ವೃತ್ತದಲ್ಲಿ ವಿಜಯೋತ್ಸವ
ವಿವಿಧ ಹಿಂದೂ ಪರ ಸಂಘಟನೆಗಳ ನೇತೃತ್ವದಲ್ಲಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷವು ಐತಿಹಾಸಿಕ ಗೆಲವು ಸಾಧಿಸಿದ ಬೆನ್ನಲೆ ಪಟಾಕಿ ಸಿಡಿಸಿ,ಸಿಹಿ ಹಂಚಿ ತಮಟೆ ಬಾರಿಸಿ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡೆ ದಿವ್ಯಾ ಹಾಗರಗಿ, ಒಬ್ಬ ಪ್ರಖರ ಹಿಂದೂತ್ವವಾದಿ ಹಾಗೂ ಸಂತನ ಗೆಲುವಾಗಿದ್ದು, ಇಡೀ ಹಿಂದೂ ಸಮಾಜಕ್ಕೆ ಹೆಮ್ಮೆಯ ಸಂಗತಿ. ದೇಶದ್ರೋಹಿಗಳಿ ಹಾಗೂ ವಿರೋಧಿಗಳಿಗೆ ಈ ಗೆಲವು ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಫಿರ್ ಏಕ್ ಬಾರ ಮೋದಿ-ಯೋಗಿ ಸರ್ಕಾರ ಎಂದು ಘೋಷಣೆ ಕೂಗುತ್ತಾ ವಿಜಯೋತ್ಸವ ಆಚರಣೆ ಮಾಡಿದರು.
ಶ್ರೀ ರಾಮ ನಮವಿ ಉತ್ಸವಕ್ಕೆ ಭದ್ರತೆ ನೀಡಿ
ಮುಂಬರುವ ಏ 10ರಂದು ಭಾನುವಾರ ಅಂದೋಲಾ ಶ್ರೀಗಳ ಹಾಗೂ ಜಿಲ್ಲೆಯ ಮಠಾಧೀಶರ ನೇತೃತ್ವದಲ್ಲಿ ಶ್ರೀ ರಾಮ ನವಮಿ ಉತ್ಸವದ ದಿನದಂದು 15 ಅಡಿ ಎತ್ತರದ ಶ್ರೀ ರಾಮನ ಭವ್ಯ ಮೂರ್ತಿಯ ಬೃಹತ ಮೆರವಣಿಗೆ ನಡೆಯಲಿದ್ದು, ಈ ಶೋಭಯಾತ್ರೆಗೆ ಸೂಕ್ತ ಪೋಲಿಸ್ ಬಂದೋಬಸ್ತ್ ಒದಗಿಸುವಂತೆ ಮನವಿ ಮಾಡಿದರು. ಅಂದು ಬೆಳಿಗ್ಗೆ 10 ಗಂಟೆಗೆ ಆಳಂದ ಚೆಕ್ ಪೋಷ್ಟನಿಂದ ಜಗತ್ ವೃತ್ತದವರೆಗೆ ನಡೆಯುವ ಶೋಭಯಾತ್ರೆಯಲ್ಲಿ 51ಕ್ಕೂ ಅಧಿಕ ಮಠಾಧೀಶರು ಭಾಗವಹಿಸಲಿದ್ದು, ವಿಜಯಪುರ,ಬೀದರ್,ಯಾದಗಿರಿ,ರಾಯಚೂರು ಸೇರಿದಂತೆ ಒಂದು ಲಕ್ಷಕ್ಕಿಂತ ಅಧಿಕ ರಾಮ ಭಕ್ತರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭ ಮಹೇಶ ಗೊಬ್ಬುರ, ಚಂದ್ರಕಾಂತ ಕಾಳಗಿ, ಸಿದ್ದು ಹಿರೇಮಠ, ಮಹೇಶ ದೇಶಪಾಂಡೆ, ಶಿವಕುಮಾರ ಹಾಗರಗಿ, ಮಹೇಶ ಕೆಂಭಾವಿ ಸೇರಿದಂತೆ ಹಲವರು ಇದ್ದರು.