Sunday, January 11, 2026

ತೆಂಗಿನಕಾಯಿ ಕೀಳುವಾಗ ವಿದ್ಯುತ್ ಸ್ಪರ್ಶ: ಯುವಕ ದುರ್ಮರಣ

ಹೊಸದಿಗಂತ ವರದಿ ವಿಟ್ಲ:

ವಿಟ್ಲ ತಾಲ್ಲೂಕಿನ ಅಳಿಕೆ ಗ್ರಾಮದಲ್ಲಿ ತೆಂಗಿನಕಾಯಿ ಕೀಳುತ್ತಿದ್ದ ವೇಳೆ ವಿದ್ಯುತ್ ಶಾಕ್‌ಗೆ ಒಳಗಾಗಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರನ್ನು ಅಳಿಕೆ ನಿವಾಸಿ ಇಸ್ಮಾಯಿಲ್ (37) ಎಂದು ಗುರುತಿಸಲಾಗಿದೆ.

ಇಸ್ಮಾಯಿಲ್ ಅವರು ತಮ್ಮ ತೋಟದಲ್ಲಿ ತೆಂಗಿನ ಮರದಿಂದ ಕಾಯಿಗಳನ್ನು ತೆಗೆಯಲು ಕಬ್ಬಿಣದ ದೋಟಿಯನ್ನು ಬಳಸುತ್ತಿದ್ದರು. ಈ ಸಂದರ್ಭದಲ್ಲಿ, ದೋಟಿಯು ಆಕಸ್ಮಿಕವಾಗಿ ಹಾದುಹೋಗುತ್ತಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದೆ. ತಕ್ಷಣವೇ ಇಸ್ಮಾಯಿಲ್ ಅವರು ಪ್ರಬಲ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ.

ಶಾಕ್‌ಗೆ ಒಳಗಾದ ಇಸ್ಮಾಯಿಲ್ ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇಸ್ಮಾಯಿಲ್ ಅವರ ಅಕಾಲಿಕ ಮರಣದಿಂದ ಅವರ ಕುಟುಂಬದವರು ತೀವ್ರ ದುಃಖದಲ್ಲಿ ಮುಳುಗಿದ್ದಾರೆ. ಮೃತ ಇಸ್ಮಾಯಿಲ್ ಅವರು ಪತ್ನಿ, ಒಬ್ಬ ಪುತ್ರಿ ಮತ್ತು ಒಬ್ಬ ಪುತ್ರನನ್ನು ಅಗಲಿದ್ದಾರೆ. ಈ ಘಟನೆ ಅಳಿಕೆ ಗ್ರಾಮದಲ್ಲಿ ಶೋಕದ ವಾತಾವರಣವನ್ನು ಸೃಷ್ಟಿಸಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!